ತೆಂಗಿನ ಮರದಿಂದ ಬಿದ್ದು ಮೃತ್ಯು

Update: 2021-10-18 16:02 GMT

ಗಂಗೊಳ್ಳಿ, ಅ.18: ತೆಂಗಿನ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆಲೂರು ಗ್ರಾಮದ ಮೂಡುಬೆಟ್ಟು ಕಳಿ ಎಂಬಲ್ಲಿ ನಡೆದಿದೆ.

ಮೃತರನ್ನು ಮೂಡುಬೆಟ್ಟು ಕಳಿ ನಿವಾಸಿ ರಾಮ ಗೌಡ(45) ಎಂದು ಗುರುತಿಸ ಲಾಗಿದೆ. ಇವರು ಅ.11ರಂದು ಬೆಳಗ್ಗೆ ಮನೆಯ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿಯನ್ನು ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ 25 ಅಡಿ ಮೇಲಿನಿಂದ ಕೆಳಗೆ ನೆಲದ ಮೇಲೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸುರತ್ಕಲ್ ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.17ರಂದು ಬೆಳಗಿನ ಜಾವ ಮೃತ ಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News