ʼಮಕ್ಕಳ ದುರ್ನಡತೆಗೆ ಹೆತ್ತವರಿಗೆ ಶಿಕ್ಷೆʼ :ಕಾನೂನು ಜಾರಿಗೆ ಚೀನಾ ಚಿಂತನೆ

Update: 2021-10-18 17:24 GMT

ಬೀಜಿಂಗ್, ಅ.18: ಮಕ್ಕಳು ಅತ್ಯಂತ ಕೆಟ್ಟ ವರ್ತನೆ ತೋರಿದರೆ ಅಥವಾ ಅಪರಾಧ ಕೃತ್ಯ ಎಸಗಿದರೆ ಅವರ ಹೆತ್ತವರನ್ನು ಶಿಕ್ಷೆಗೆ ಒಳಪಡಿಸಲು ಅವಕಾಶ ನೀಡುವ ಕಾನೂನನ್ನು ಜಾರಿಗೊಳಿಸುವ ಬಗ್ಗೆ ಚೀನಾದ ಸಂಸತ್ತು ಪರಿಶೀಲನೆ ನಡೆಸಲಿದ ಎಂದು ಸಂಸದೀಯ ವ್ಯವಹಾರ ಸಮಿತಿಯ ವಕ್ತಾರ ಝಾಂಗ್ ತೈವೆ ಹೇಳಿದ್ದಾರೆ.

ಮಕ್ಕಳು ಕೆಟ್ಟದಾಗಿ ವರ್ತಿಸಲು ಹಲವು ಕಾರಣಗಳಿದ್ದು ಇದರಲ್ಲಿ ಕೌಟುಂಬಿಕ ಶಿಕ್ಷಣದ ಕೊರತೆಯೂ ಒಂದು ಕಾರಣವಾಗಿದೆ. ಮಕ್ಕಳ ವರ್ತನೆ ಅತ್ಯಂತ ಕೆಟ್ಟದಾಗಿದ್ದರೆ ಹೆತ್ತವರು ಕೌಟುಂಬಿಕ ಶಿಕ್ಷಣ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಮಕ್ಕಳಿಗೆ ವಿಶ್ರಾಂತಿ ಪಡೆಯಲು, ಆಟವಾಡಲು ಮತ್ತು ವ್ಯಾಯಾಮ ಮಾಡಲು ಸಮಯ ನಿಗದಿಪಡಿಸುವುದು ಹೆತ್ತವರ ಕರ್ತವ್ಯವಾಗಿದೆ ಎಂದು ‘ಫ್ಯಾಮಿಲಿ ಎಜುಕೇಶನ್ ಪ್ರೊಮೋಷನ್ ಲಾ’ ಎಂಬ ಮಸೂದೆಯಲ್ಲಿ ಸೂಚಿಸಲಾಗಿದೆ.

ಚೀನಾದಲ್ಲಿ ಯುವಜನತೆ ಆನ್ಲೈನ್ ಗೇಮ್ಗಳ ಗೀಳು ಬೆಳೆಸಿಕೊಂಡಿದ್ದು ಇಂಟರ್ನೆಟ್ ಸೆಲೆಬ್ರಿಟೀಸ್ಗಳನ್ನು ಕಣ್ಣುಮುಚ್ಚಿ ಆರಾಧಿಸುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಜೊತೆಗೆ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆಯು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ ಪ್ರತೀ ದಿನ ಕೇವಲ 1 ಗಂಟೆ ಮಾತ್ರ ಆನ್ಲೈನ್ ಗೇಮ್ನಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಬೇಕೆಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News