ಬಲ್ಮಠ : ಆಟೋ ಸ್ಪೇರ್‌ ಪಾರ್ಟ್ಸ್ ಮಳಿಗೆಗೆ ಬೆಂಕಿ ಆಕಸ್ಮಿಕ

Update: 2021-10-18 18:21 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಅ.18: ನಗರದ ಬಲ್ಮಠ ರಸ್ತೆಯ ಹೆಲ್ಮೆಟ್ ಅಂಗಡಿಗೆ ಬೆಂಕಿ ತಗಲಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ಬಲ್ಮಠದ ಶ್ರೀಕೃಷ್ಣ ಆಟೋ ಆ್ಯಂಡ್ ಸ್ಪೇರ್‌ ಪಾರ್ಟ್ಸ್ ಮಳಿಗೆಯಲ್ಲಿನ ಹೆಲ್ಮೆಟ್, ದ್ವಿಚಕ್ರ ವಾಹನ ಉಪಕರಣ ಸಹಿತ ಅಪಾರ ಹಾನಿ ಸಂಭವಿಸಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ.‌ ಕೆಲವೇ ಹೊತ್ತಲ್ಲಿ ಬೆಂಕಿ ನಂದಿಸಲಾಗಿದೆ ಎಂದು ಪಾಂಡೇಶ್ವರದ ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News