ಬಾಲಕಿಯರ ಶಿಕ್ಷಣದ ಮೇಲಿನ ನಿಷೇಧ ರದ್ದುಗೊಳಿಸಿ ತಾಲಿಬಾನ್ ಗೆ ಮಲಾಲಾ ಆಗ್ರಹ

Update: 2021-10-18 18:29 GMT

ಕಾಬೂಲ್, ಅ.18: ಅಫ್ಗಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆದು ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ತಕ್ಷಣದಿಂದ ಆರಂಭಿಸಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಝಾಯ್ ಆಗ್ರಹಿಸಿದ್ದಾರೆ.

ಬಾಲಕಿಯರನ್ನು ಶಾಲೆಗೆ ತೆರಳದಂತೆ ನಿಷೇಧಿಸುವುದನ್ನು ಧರ್ಮವು ಸಮರ್ಥಿಸುವುದಿಲ್ಲ ಎಂದು ತಾಲಿಬಾನ್ಗಳಿಗೆ ಸ್ಪಷ್ಟಪಡಿಸುವಂತೆ ಅವರು ಮುಸ್ಲಿಮ್ ರಾಷ್ಟ್ರಗಳ ಮುಖಂಡರನ್ನು ಕೋರಿದ್ದಾರೆ. ಬಾಲಕಿಯರ ಶಿಕ್ಷಣದ ಮೇಲಿನ ನಿಷೇಧ ಹಿಂಪಡೆಯುವ ರವಿವಾರ ಪ್ರಕಟವಾದ ಬಹಿರಂಗ ಪತ್ರದಲ್ಲಿ ಆಗ್ರಹಿಸಿದ್ದು ಮಲಾಲಾ, ಅಫ್ಗಾನ್ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ಶಹರ್ಝಾದ್ ಅಕ್ಬರ್ ಸಹಿತ ಅಫ್ಗಾನ್ನ ಹಲವು ಮಹಿಳಾ ಹಕ್ಕು ಕಾರ್ಯಕರ್ತರು ಇದಕ್ಕೆ ಸಹಿ ಹಾಕಿದ್ದಾರೆ. ಈ ಪತ್ರದ ಜತೆಗಿದ್ದ ಮನವಿ ಪತ್ರಕ್ಕೆ ಸೋಮವಾರ 6,40,000ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.

ಅಫ್ಗಾನಿಸ್ತಾನ ಮಹಿಳೆಯರಿಗೆ ಶಿಕ್ಷಣಾವಕಾಶ ನಿಷೇಧಿಸಿರುವ ಏಕೈಕ ರಾಷ್ಟ್ರವಾಗಿದೆ. ಆದ್ದರಿಂದ ಈ ನಿಷೇಧ ಹಿಂಪಡೆಯುವಂತೆ ತಾಲಿಬಾನ್ಗಳ ಮೇಲೆ ಒತ್ತಡ ಹೇರಬೇಕು ಮತ್ತು ಅಫ್ಗಾನಿಸ್ತಾನದ ಮಕ್ಕಳಿಗೆ ಶಿಕ್ಷಣ ಯೋಜನೆ ರೂಪಿಸಲು ತುರ್ತಾಗಿ ಆರ್ಥಿಕ ನೆರವು ಒದಗಿಸುವಂತೆ ಜಿ20 ದೇಶಗಳ ಮುಖಂಡರಿಗೆ ಮನವಿ ಮಾಡಲಾಗಿದೆ.
ಬಾಲಕಿಯರ ಶಿಕ್ಷಣಕ್ಕಾಗಿ ಕೆಲಸ ಮಾಡುವ ಸಂಘಟನೆಯ ಕಾರ್ಯಕರ್ತೆಯಾಗಿರುವ ಮಲಾಲಾ ಮೇಲೆ 2012ರಲ್ಲಿ ತಾಲಿಬಾನ್ಗಳ ಸಹಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಗುಂಡಿನ ದಾಳಿ ನಡೆಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News