ಬಿಜೆಪಿ ಸಚಿವರನ್ನು ಭೇಟಿ ಮಾಡಿದ ʼನಿಹಾಂಗ್‌ʼ ಮುಖ್ಯಸ್ಥ ಅಮನ್‌ ಸಿಂಗ್:‌ ವರದಿ ಟ್ವೀಟಿಸಿದ ಕಿಸಾನ್‌ ಏಕ್ತಾ ಮೋರ್ಚ

Update: 2021-10-19 06:49 GMT
Photo: Tribuneindia

ಹೊಸದಿಲ್ಲಿ: ರೈತರು ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಪವಿತ್ರ ಗ್ರಂಥವನ್ನು ಅಪಮಾನಿಸಿದ್ದಾನೆ ಎಂಬ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೊಂದು ತೂಗು ಹಾಕಲಾಗಿತ್ತು. ಈ ಪ್ರಕರಣದ ಹಿಂದೆ ನಿಹಾಂಗ್‌ ಸಿಖ್ಖರ ಕೈವಾಡವಿದ್ದದ್ದು ಸಾಬೀತಾಗಿತ್ತು. ಇದೀಗ ನಿಹಾಂಗ್‌ ಸಿಖ್ಖರ ಮುಖ್ಯಸ್ಥ ಬಾಬ ಅಮನ್‌ ಸಿಂಗ್‌ ಎಂಬಾತ ಬಿಜೆಪಿ ಸಚಿವರ ಜೊತೆಗಿರುವ ಫೋಟೊ ಹಾಗೂ ವರದಿಯನ್ನು ಕಿಸಾನ್‌ ಏಕ್ತಾ ಮೋರ್ಚಾ ಟ್ವೀಟ್‌ ಮಾಡಿದೆ. 

ಮೂಲಗಳ ಪ್ರಕಾರ, ಕೇಂದ್ರ ಕೃಷಿ ಸಚಿವ ಎನ್‌ಎಸ್‌ ತೋಮರ್‌ ರನ್ನು ನಿಹಾಂಗ್‌ ಮುಖ್ಯಸ್ಥ ಹಾಗೂ ಇನ್ನಿತರರು ಭೇಟಿ ಮಾಡಿದ್ದಾರೆ. "ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆ ಹಾಗೂ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ಈ ವಿಚಾರದಲ್ಲಿ ಪರಿಹಾರವೊಂದನ್ನು ಹುಡುಕುವ ಸಲುವಾಗಿ ಭೇಟಿಯಾಗಿದ್ದೆವು. ಬಾಬಾ ಅಮನ್‌ ಸಿಂಗ್‌ ಕೂಡಾ ಭಾಗಿಯಾಗಿದ್ದರು. ಈ ವಿಚಾರವನ್ನು ನಿಯಂತ್ರಣಕ್ಕೆ ತರಬೇಕು ಎನ್ನುವುದು ಅವರ ಆಗ್ರಹವೂ ಆಗಿದೆ" ಎಂದು ಸುಖ್ಮಿಂದರ್‌ ಪಾಲ್‌ ಹೇಳಿಕೆ ನೀಡಿದ್ದಾರೆ.  ಆದರೆ ಸಿಂಘು ಗಡಿಯಲ್ಲಿ ನಡೆದ ವ್ಯಕ್ತಿಯ ಕ್ರೂರ ಹತ್ಯೆ ಹಾಗೂ ಈ ಭೇಟಿಯ ನಡುವೆ ಸಂಶಯಾಸ್ಪದ ಅಂಶಗಳು ಒಳಗೊಂಡಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News