ಮೀಲಾದುನ್ನಬಿ ಪ್ರಯುಕ್ತ ಗುರುವಾಯನಕೆರೆ ಮಸ್ಜಿದ್ ನಲ್ಲಿ ರಕ್ತದಾನ ಶಿಬಿರ

Update: 2021-10-19 07:32 GMT

ಬೆಳ್ತಂಗಡಿ, ಅ.19: ಸಂಪತ್ತು ದಾನ ಮಾಡಬೇಕಾದರೆ ಆತ ಧನಿಕನಾಗಿರಬೇಕು. ಸಂಪತ್ತು ಇದ್ದರೂ ಒಳ್ಳೆಯ ಮನಸ್ಸು ಇಲ್ಲದಿದ್ದರೆ ಅದು ಆತನಿಂದ ಅಸಾಧ್ಯ.‌ ಆದರೆ ರಕ್ತದಾನ ಆರೋಗ್ಯವಂತ ಬಡವನೂ ಮಾಡುವ ಅವಕಾಶ ಪಡೆಯುತ್ತಾನೆ ಎಂದು ಗುರುವಾಯನಕೆರೆ ಜಮಾಅತ್ ಗಲ್ಫ್ ಕಮಿಟಿ ಅಧ್ಯಕ್ಷ ಸಲೀಂ ಗುರುವಾಯನಕೆರೆ ಹೇಳಿದ್ದಾರೆ.

ಗುರುವಾಯನಕೆರೆ ಹಝ್ರತ್ ಶೈಕ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮಾ‌ ಮಸ್ಜಿದ್, ಬ್ಲಡ್ ಡೋನರ್ಸ್ ಫೋರಂ, ತಾಜುಲ್ ಹುದಾ ಯಂಗ್ ಮೆನ್ಸ್ ಇವುಗಳ ಜಂಟಿ ಆಶ್ರಯದಲ್ಲಿ ಮೀಲಾದುನ್ನಬಿ ಪ್ರಯುಕ್ತ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳವಾರ ಗುರುವಾಯನಕೆರೆ ಶಾದಿ ಮಹಲ್ ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಖ್ಯಾತ ವೈದ್ಯ ಡಾ.ವೇಣುಗೋಪಾಲ ಶರ್ಮ ಶಿಬಿರವನ್ನು ಉದ್ಘಾಟಿಸಿದರು.

 ಪತ್ರಕರ್ತ ಅಶ್ರಫ್ ಅಲಿಕುಂಞಿ ಮುಂಡಾಜೆ, ಕುವೆಟ್ಟು ಗ್ರಾಪಂ ಸದಸ್ಯ ಮುಸ್ತಫ ಜಿ.ಕೆ. ಮಾತನಾಡಿದರು.

ವೇದಿಕೆಯಲ್ಲಿ ದರ್ಗಾ ಕಮಿಟಿಯ ಅಧ್ಯಕ್ಷ ಉಸ್ಮಾನ್ ಬಳಂಜ, ಜಮಾಅತ್ ಕಮಿಟಿ ಅಧ್ಯಕ್ಷ ಲತೀಫ್ ಹಾಜಿ, ಬ್ಲಡ್ ಡೋನರ್ಸ್ ಫೋರಂ ಅಧ್ಯಕ್ಷ ಇಬ್ರಾಹೀಂ, ಗೌರವಾಧ್ಯಕ್ಷ  ಇಸ್ಮಾಯೀಲ್ ಕೆ.ಪಿ., ಉದ್ಯಮಿ ಉಸ್ಮಾನ್ ಶಾಫಿ, ತಾಜುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಜಿ.ಎ.ಅಶ್ರಫ್, ಮಸ್ಜಿದ್ ಕಾರ್ಯದರ್ಶಿ ಅಯ್ಯೂಬ್, ಕಾರ್ಯಕರ್ತರಾದ ಫಯಾಝ್, ರಝ್ವೀನ್, ಉಸ್ಮಾನ್ ಕೋಂಟುಪಲಿಕೆ, ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

ಗುರುವಾಯನಕೆರೆ ಮುದರ್ರಿಸ್ ಆದಂ ಅಹ್ಸನಿ ದುಆ ನೆರವೇರಿಸಿದರು. ಸದರ್ ಉಮರ್ ಶಾಫಿ ಸಖಾಫಿ ಸ್ವಾಗತಿಸಿದರು. ಉದ್ಯಮಿ ಹಾಜಿ ಹಸೈನಾರ್ ಶಾಫಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಮಸ್ಜಿದ್ ಒಳಾಂಗಣದಲ್ಲಿ ಸೈಯದ್ ಸಾದಾತ್ ತಂಙಳ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News