ಕಾರಿನ ದಾಖಲೆ ಕೇಳಿದ ಟ್ರಾಫಿಕ್ ಪೊಲೀಸನ್ನು ಅಪಹರಿಸಿದ ವ್ಯಕ್ತಿಯ ಬಂಧನ

Update: 2021-10-19 09:48 GMT

ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 29ರ ವಯಸ್ಸಿನ ವ್ಯಕ್ತಿ ಯೋರ್ವನನ್ನು ತನ್ನ ಕಾರಿನ ದಾಖಲೆಗಳನ್ನು ಪರೀಕ್ಷಿಸಲು ತಡೆದ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಅನ್ನು ಅಪಹರಿಸಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರು ಕಳ್ಳತನವಾಗಿರಬಹುದೆಂದು ಶಂಕಿಸಲಾಗಿದ್ದು, ದಾಖಲೆಗಳನ್ನು ನೋಡಲು ಟ್ರಾಫಿಕ್ ಪೋಲಿಸನ್ನು ವಾಹನದ ಒಳಗೆ ಬರುವಂತೆ ಆರೋಪಿ ಕೇಳಿಕೊಂಡಿದ್ದ. ಪೊಲೀಸ್ ಕಾರಿನೊಳಗೆ ಕುಳಿತ ತಕ್ಷಣ ಕಾರು ಚಲಾಯಿಸಿದ ಆರೋಪಿ ಟ್ರಾಫಿಕ್ ಪೊಲೀಸ್ ಅವರನ್ನು ಪೊಲೀಸ್ ಪೋಸ್ಟ್ ಬಳಿ ಎಸೆಯುವ ಮೊದಲು ಬಲವಂತವಾಗಿ 10 ಕಿ.ಮೀ.ದೂರದವರೆಗೆ ಕರೆದೊಯ್ದಿದ್ದ ಎಂದು ಅವರು ಹೇಳಿದರು.

"ಆರೋಪಿ ಸಚಿನ್ ರಾವಲ್ ಎರಡು ವರ್ಷಗಳ ಹಿಂದೆ ಹರಿಯಾಣದ ಗುರ್ಗಾಂವ್‌ನಲ್ಲಿರುವ  ಶೋರೂಂನಿಂದ ಮಾರುತಿ ಸ್ವಿಫ್ಟ್ ಡಿಝೈರ್ ಕಾರನ್ನು ಟೆಸ್ಟ್ ಡ್ರೈವ್‌ನಲ್ಲಿ ಹೊರತೆಗೆಯುವ ನೆಪದಲ್ಲಿ ಕದ್ದಿದ್ದ" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

"ಗ್ರೇಟರ್ ನೋಯ್ಡಾದ ಘೋಡಿ ಬಚೆಡಾ ಗ್ರಾಮದಲ್ಲಿ ವಾಸಿಸುತ್ತಿರುವ ರಾವಲ್, ತನ್ನ ಕಾರಿನ ಮೇಲೆ ನಕಲಿ ನಂಬರ್ ಪ್ಲೇಟ್ ಹಾಕಿದ್ದ, ಅದರ ಸಂಖ್ಯೆಯು ಅವರ ಹಳ್ಳಿಯ ನಿವಾಸಿಗಳಿಗೆ ಸೇರಿದ ಕಾರಿನ ಸಂಖ್ಯೆಯಾಗಿದೆ" ಎಂದು ಅವರು ಹೇಳಿದರು.

ರವಿವಾರ ಬೆಳಿಗ್ಗೆ ಟ್ರಾಫಿಕ್ ಪೊಲೀಸರು ಸೂರಜ್‌ಪುರದಲ್ಲಿ ವಾಹನ ತಪಾಸಣೆ ಅಭಿಯಾನವನ್ನು ಆರಂಭಿಸಿದ್ದರು, ಅಲ್ಲಿ ರಾವಲ್ ಕದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಬಂದ ನಂತರ ವಿಚಾರಣೆಗೆ ತಡೆಹಿಡಿಯಲಾಯಿತು ಎಂದು ಅಧಿಕಾರಿ ಹೇಳಿದರು.

ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಟ್ರಾಫಿಕ್ ಕಾನ್ಸ್ಟೇಬಲ್ ವೀರೇಂದ್ರ ಸಿಂಗ್ ಅವರು  ರಾವಲ್ ಅನ್ನು ಕೇಳಿದ್ದರು. ರಾವಲ್ , ಸಿಂಗ್ ಅವರನ್ನು  ಕಾರಿನ ಒಳಗೆ ಬರುವಂತೆ ಕೇಳಿಕೊಂಡ. ತನ್ನ ಮೊಬೈಲ್ ಫೋನಿನಲ್ಲಿರುವ ದಾಖಲೆಗಳ ಸಾಫ್ಟ್ ಕಾಪಿಗಳನ್ನು ತೋರಿಸುವುದಾಗಿ ಹೇಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News