ಬಾಂಗ್ಲಾ ಹಿಂದೂಗಳ ಮೇಲಿನ ದಾಳಿ ಪ್ರಕರಣಗಳನ್ನು ಖಂಡಿಸಿದ ವಿಶ್ವಸಂಸ್ಥೆ, ಆಮ್ನೆಸ್ಟಿ ಇಂಟರ್‌ ನ್ಯಾಶನಲ್

Update: 2021-10-19 13:55 GMT
Photo: Reuters/Mohammad Ponir Hossain

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಇತ್ತೀಚೆಗೆ ನಡೆದ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಸಂಸ್ಥೆ ಈ ಘಟನೆಗಳ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಆಗ್ರಹಿಸಿದೆ.

"ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ದ್ವೇಷದ ವಿಚಾರವೊಂದರಿಂದ ಪ್ರಚೋದನೆಗೊಂಡು ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದಾಳಿಗಳು ಸಂವಿಧಾನವಿರೋಧಿಯಾಗಿವೆ, ಇಂತಹ ದಾಳಿಗಳು ನಿಲ್ಲಬೇಕು, ಒಂದು ಸಹಿಷ್ಣು ದೇಶವಾಗಿ ಬಾಂಗ್ಲಾದೇಶವನ್ನು ಬಲಪಡಿಸಲು ಎಲ್ಲರೂ ಜತೆಗೂಡಬೇಕಿದೆ" ಎಂದು ಬಾಂಗ್ಲಾದೇಶದಲ್ಲಿರುವ ವಿಶ್ವ ಸಂಸ್ಥೆ ಅಧಿಕಾರಿ ಮಿಯಾ ಸೆಪ್ಪೊ ಹೇಳಿದ್ದಾರೆ.

ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಕೂಡ ಇತ್ತೀಚಿಗಿನ ದಾಳಿಗಳ ಕುರಿತು ತನ್ನ ಕಳವಳ ವ್ಯಕ್ತಪಡಿಸಿದೆ. ಸಂಸ್ಥೆಯ ದಕ್ಷಿಣ ಏಷ್ಯಾ ಅಧಿಕಾರಿ ಸಾದ್ ಹಮ್ಮದಿ ಪ್ರತಿಕ್ರಿಯಿಸಿ "ದೇಶದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತ ವಿರೋಧಿ ಭಾವನೆಯನ್ನು ಈ ದಾಳಿಗಳು ಪ್ರತಿಫಲಿಸುತ್ತಿವೆ, ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಇಂತಹ ದಾಳಿಗಳು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ" ಎಂದು ಹೇಳಿದ್ದಾರೆ. ಸರಕಾರವು ಅಲ್ಪಸಂಖ್ಯಾತರ ರಕ್ಷಣೆಗೆ ಮತ್ತು ಅವರಿಗೆ ನ್ಯಾಯ ಒದಗಿಸಿಕೊಡಲು ಶ್ರಮಿಸಬೇಕೆಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ  ದಂಡ ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News