×
Ad

ಉಡುಪಿ ಜಿಲ್ಲೆಯಾದ್ಯಂತ ಸರಳವಾಗಿ ಮೀಲಾದುನ್ನಬಿ ಆಚರಣೆ

Update: 2021-10-19 19:06 IST

ಉಡುಪಿ, ಅ.19: ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ.)ಅವರ ಜನ್ಮದಿನಾಚರಣೆ ಮಿಲಾದುನ್ನಬಿಯನ್ನು ಉಡುಪಿ ಜಿಲ್ಲೆಯ ಹಲವು ಮಸೀದಿ ಗಳಲ್ಲಿ ಮಂಗಳವಾರ ಸರಕಾರದ ಮಾರ್ಗಸೂಚಿಯಂತೆ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಉಡುಪಿ ತಾಲೂಕಿನ ದೊಡ್ಡಣಗುಡ್ಡೆ, ಹೂಡೆ, ನೇಜಾರ್, ಕುಂದಾಪುರ, ಶಿರೂರು, ಕೋಡಿ, ಕಾರ್ಕಳ, ಕಾಪು ತಾಲೂಕಿನ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ಎರ್ಮಾಳು, ಮುದರಂಗಡಿ, ಉಚ್ಚಿಲ, ಮೂಳೂರು, ಕಾಪು, ಕಟಪಾಡಿ, ಮಜೂರು, ಮಲ್ಲಾರು, ಶಿರ್ವ, ಮಣಿಪುರ ಮಸೀದಿಗಳಲ್ಲಿ ಮಿಲಾದುನ್ನಬಿಯನ್ನು ಆಚರಿಸಲಾಯಿತು. ಸರಕಾರದ ಆದೇಶದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೀಲಾ್ ರ್ಯಾಲಿಯನ್ನು ರದ್ದು ಪಡಿಸಲಾಗಿದೆ.

ವಿವಿಧ ಮಸೀದಿಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ವೌಲಿದ್ ಮಜ್ಲೀಸ್ ನಡೆಯಿತು. ಮದರಸಗಳ ವಿದ್ಯಾರ್ಥಿಗಳಿಂದ ಪ್ರವಾದಿ ಸಂದೇಶಗಳನ್ನು ಒಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ದಲ್ಲಿ ಪ್ರತಿಭಾನ್ವಿತ ಮದ್ರಸ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News