ದ.ಕ.ಜಿಲ್ಲೆಯಲ್ಲಿ ಸರಳ ಮೀಲಾದುನ್ನಬಿ ಆಚರಣೆ

Update: 2021-10-19 16:32 GMT

ಮಂಗಳೂರು, ಅ.19: ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು (ಮೀಲಾದುನ್ನೆಬಿ) ಮಂಗಳವಾರ ದ.ಕ.ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ ಮೇರೆಗೆ ನಗರ ಮತ್ತು ಹೊರವಲಯದ ಪ್ರಮುಖ ಕಡೆ ವರ್ಷಂಪ್ರತಿ ನಡೆಯುತ್ತಿದ್ದ  ಮೀಲಾದ್ ರ್ಯಾಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಸ್ವಯಂಪ್ರೇರಿತರಾಗಿ ರದ್ದುಪಡಿಸಿದ್ದರು. ಆದಾಗ್ಯೂ ಕೋವಿಡ್-19 ನಿಯಮ ಪಾಲನೆಯೊಂದಿಗೆ ನಗರ ಮತ್ತು ಗ್ರಾಮಾಂತರ ಭಾಗದ ಹಲವು ಕಡೆಯ ಮಸೀದಿಗಳಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಸಂದೇಶ ಭಾಷಣ, ಮೌಲಿದ್ ಪಾರಾಯಣ, ಮದ್ರಸ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ, ಬಹುಮಾನ ವಿತರಣೆ ಮತ್ತು ರ್ಯಾಲಿ ಇತ್ಯಾದಿ ಕಾರ್ಯಕ್ರಮ ಸರಳವಾಗಿ ನಡೆಸಲಾಯಿತು.

ಕಿನ್ಯ ಕುತುಬಿ ನಗರ ಶೇಖ್ ಮರ್ಕಝ್ ಯೂತ್ ವೆಲ್ಫೇರ್ ಅಸೋಸಿಯೇಶನ್‌ನ 30ನೇ ವಾರ್ಷಿಕೋತ್ಸವ ಹಾಗೂ ಮೀಲಾದುನ್ನೆಬಿ ಆಚರಣೆ ಮಂಗಳವಾರ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ಬಿ.ಎಂ. ಇಸ್ಮಾಯೀಲ್ ಹಾಜಿ ಧ್ವಜಾರೋಹಣಗೈದರು ಸೈಯದ್ ಶಿಹಾಬುದ್ದೀನ್ ತಂಙಳ್ ದುಆಗೈದರು. ಕಿನ್ಯಾ ಕೇಂದ್ರ ಜುಮಾ ಮಸೀದಿಯ ಖತೀಬ್ ಪತ್ತಾಹ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಹುಸೈನ್ ಸಅದಿ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಎ.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕುತುಬಿ ನಗರ ಮಸೀದಿಯ ಖತೀಬ್ ಎನ್.ಎಂ.ಅಬ್ದುಲ್ ರಝಾಕ್ ಮದನಿ, ಮುಅಲ್ಲಿಮರಾದ ರಫೀಕ್ ಸಖಾಫಿ, ಹಂಝ ಝುಹ್ರಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಗ್ರಾಪಂ  ಸದಸ್ಯ ಸಿರಾಜುದ್ದೀನ್ ಕಿನ್ಯಾ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಅಬ್ಬಾಸ್ ಕುತುಬಿ ನಗರ ಸ್ವಾಗತಿಸಿದರು.  ಎಸ್‌ಎಂವೈಡಬ್ಲ್ಯುಎ ಜೊತೆ ಕಾರ್ಯದರ್ಶಿ ಜಮಾಲುದ್ದೀನ್ ಮಿತ್ತಡ ವಂದಿಸಿದರು.

ತಲಪಾಡಿ ಸಮೀಪದ ಕೆ.ಸಿ. ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್, ತಲಪಾಡಿ ಬಿಲಾಲ್ ಜುಮಾ ಮಸ್ಜಿದ್, ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ , ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್, ಎಸ್. ಉಚ್ಚಿಲ 407 ಜುಮಾ ಮಸ್ಜಿದ್, ಕೆ.ಸಿ.ನಗರ ಮಸ್ಜಿದ್ಹುಲ್ ಹುದಾ ಮತ್ತಿತರ ಮಸೀದಿಗಳಲ್ಲಿ ಮೀಲಾದುನ್ನೆಬಿ ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News