'ಕಾನ್ ಫ್ಲುವೆನ್ ಶಿಯ-21' ಕಲಾ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Update: 2021-10-19 16:37 GMT

ಕಾಶಿಪಟ್ಣ: ದಾರುನ್ನೂರ್ ಎಜುಕೇಶನ್ ಸೆಂಟರ್ ವಿದ್ಯಾಸಂಸ್ಥೆಯಲ್ಲಿ ವರ್ಷಂಪ್ರತಿ ಪ್ರವಾದಿ ಜನ್ಮದಿನಾಚರಣೆಯ ಪ್ರಯುಕ್ತ ನಡೆಸಿಕೊಂಡು ಬರುವ ವಿದ್ಯಾರ್ಥಿಗಳ ಕಲಾ-ಸಾಂಸ್ಕೃತಿಕ ಮತ್ತು ಕ್ರೀಡಾ-ಕಾರ್ಯಕ್ರಮಗಳ ಲೋಗೋ ಪ್ರದರ್ಶನವನ್ನು ದ.ಕ ಜಿಲ್ಲಾ ಖಾಝಿ ಹಾಗೂ ದಾರುನ್ನೂರ್ ಎಜುಕೇಶನ್ ಸೆಂಟರಿನ ಅಧ್ಯಕ್ಷರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಅಲ್-ಅಝ್ ಹರಿಯವರು ದಾರುನ್ನೂರ್ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್ ಫ್ಲವರ್ ಇವರ ಉಪಸ್ಥಿತಿಯಲ್ಲಿ ನೆರವೇರಿಸಿದರು.

ಕಾನ್ ಫ್ಲುವೆನ್ ಶಿಯ-21 ನಾಮಕರಣದೊಂದಿಗೆ ವಿದ್ಯಾರ್ಥಿಗಳ ಕಲಾ-ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಸಂಸ್ಥೆಯ ಮುಈನುದ್ದೀನ್ ಚಿಶ್ತಿ ಹುದವಿಯವರು ದುಆ ಮೂಲಕ ಚಾಲನೆ ನೀಡಿದರು.

ವಿದ್ಯಾರ್ಥಿ ಸಅದ್ ಕಿರಾಅತ್ ಪಠಿಸಿ, ಪ್ರಾಂಶುಪಾಲರಾದ ಅಮೀನ್ ಹುದವಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿ ದಾರುನ್ನೂರ್ ಸಂಸ್ಥೆಯ ವ್ಯವಸ್ಥಾಪಕರಾದ ಎಮ್.ಎಸ್ ಹಕೀಂ ಮಾತನಾಡಿದರು. ಕಾರ್ಯಕ್ರಮದ ಮೇಲ್ವಿಚಾರಕರಾದ ಶಾಹಿದ್ ಹುದವಿ ಕಾರ್ಯಕ್ರಮದ  ರೂಪುಗಳನ್ನು ವಿಶ್ಲೇಷಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಬೋಸ್ಫರಸ್, ಜಿಬ್ರಾಲ್ಟರ್, ಸಿಸಿಲಿ ಹಾಗೂ ಹೋರ್ಮಝ್ ತಂಡದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ದಾರುನ್ನೂರ್ ಉಪಪ್ರಾಂಶುಪಾಲರಾದ ತ್ವಾಹಾ ಹುದವಿ ಸ್ವಾಗತಿಸಿ ಶಾಹಿದ್ ಹುದವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News