ನ್ಯೂಝಿಲ್ಯಾಂಡ್: ಸೋಂಕು ಉಲ್ಬಣ ಲಸಿಕೆ ಪಡೆದುಕೊಳ್ಳಲು ಜನತೆಗೆ ಸೂಚನೆ

Update: 2021-10-19 18:07 GMT

ವೆಲ್ಲಿಂಗ್ಟನ್, ಅ.19: ನ್ಯೂಝಿಲ್ಯಾಂಡ್ನಲ್ಲಿ ಮಂಗಳವಾರ (ಅ.18) ಒಂದೇ ದಿನ ಕೊರೋನ ಸೋಂಕಿನ 94 ಹೊಸ ಪ್ರಕರಣ ದಾಖಲಾಗಿದ್ದು ಇದು ಒಂದೇ ದಿನ ದಾಖಲಾಗಿರುವ ಅತ್ಯಧಿಕ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 18 ತಿಂಗಳ ಹಿಂದೆ ಒಂದೇ ದಿನ 84 ಪ್ರಕರಣ ದಾಖಲಾಗಿರುವುದು ನ್ಯೂಝಿಲ್ಯಾಂಡ್ನ ಇದುವರೆಗಿನ ದಾಖಲೆಯಾಗಿದೆ. ಸೋಂಕಿನ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸರಕಾರ, ತಕ್ಷಣ ಲಸಿಕೆ ಪಡೆಯುವಂತೆ ಜನತೆಗೆ ಸೂಚಿಸಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣ, ಲಾಕ್ಡೌನ್ ಜಾರಿಯಲ್ಲಿರುವ ಆಕ್ಲಂಡ್ನಲ್ಲಿ ದಾಖಲಾಗಿದೆ.

ಲಾಕ್ಡೌನ್ ನಿಯಮ ಉಲ್ಲಂಘಿಸುವವರು ಸೋಂಕು ಉಲ್ಬಣಿಸಲು ತಮ್ಮ ಕೊಡುಗೆ ನೀಡುತ್ತಿದ್ದಾರೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಯುವಜನತೆಯಲ್ಲಿ ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಹೇಳಿದ್ದಾರೆ.

ನ್ಯೂಝಿಲ್ಯಾಂಡ್ನಲ್ಲಿ ಕಠಿಣ ಲಾಕ್ಡೌನ್ ಮತ್ತು ಸಂಪರ್ಕ ಪತ್ತೆ ಕಾರ್ಯದ ಮೂಲಕ ಈ ಹಿಂದೆ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಈಗಲೂ ಸೋಂಕನ್ನು ನಿಯಂತ್ರಿಸುವ ಸಾಮರ್ಥ್ಯ ಮತ್ತು ಶಕ್ತಿ ನಮ್ಮಲ್ಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News