ದಾರಿ ಮಧ್ಯೆ ಅಪಘಾತಕ್ಕೊಳಗಾಗಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ ಪ್ರಿಯಾಂಕಾ ಗಾಂಧಿ

Update: 2021-10-20 13:35 GMT
Photo: Screengrab/ANI

ಲಕ್ನೋ: ಉತ್ತರಪ್ರದೇಶದ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಹಾಗೂ ಸಹಚರರನ್ನು ಪೊಲೀಸರು ತಡೆದಿದ್ದರು. ಅಂತೆಯೇ ಇಂದು ದಲಿತ ವ್ಯಕ್ತಿಯೋರ್ವರ ಲಾಕಪ್‌ ಡೆತ್‌ ಕುರಿತು ಪ್ರಶ್ನಿಸುವ ಸಲುವಾಗಿ ತೆರಳಿದ್ದ ಪ್ರಿಯಾಂಕಾರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಈ ನಡುವೆ ಪ್ರಿಯಾಂಕಾ ಗಾಂಧಿ ವಿಭಿನ್ನ ಕಾರಣವೊಂದಕ್ಕೆ ಸಂಬಂಧಿಸಿ ಸುದ್ದಿಯಾಗಿದ್ದಾರೆ.

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ತನ್ನ ಬೆಂಗಾವಲು ವಾಹನದೊಂದಿಗೆ ಆಗ್ರಾಗೆ ತೆರಳುತ್ತಿದ್ದ ವೇಳೆ ಸಮೀಪದಲ್ಲಿ ಮಹಿಳೆಯೋರ್ವರು ಅಪಘಾತಕ್ಕೀಡಾದ ದೃಶ್ಯ ಕಂಡುಬಂದಿದ್ದು, ಕೂಡಲೇ ತನ್ನ ವಾಹನ ನಿಲ್ಲಿಸಿ ಸ್ಥಳಕ್ಕೆ ತೆರಳಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಘಟನೆ ಲಕ್ನೋದ ಗೋಮತಿ ನಗರ್‌ ಸಮೀಪ ನಡೆದಿದೆ ಎಂದು ANI ವರದಿ ಮಾಡಿದೆ. ಸದ್ಯ ಪ್ರಿಯಾಂಕಾರ ಈ ಕಾರ್ಯ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News