ಅಕ್ರಮ ಕೋವಿ: ಓರ್ವನ ಬಂಧನ

Update: 2021-10-20 16:49 GMT

ಮಣಿಪಾಲ, ಅ.20: ಹಿರೇಬೆಟ್ಟು ಮುಡಾಯಿಕೋಡಿಯ ಹಾಡಿಯಲ್ಲಿ ಅ.20ರಂದು ಬೆಳಗ್ಗೆ ಅಕ್ರಮವಾಗಿ ಕೋವಿ ಹಿಡಿದು ತಿರುಗಾಡುತ್ತಿದ್ದ ಓರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಹಿರೇಬೆಟ್ಟು ಅಗ್ರಬೈಲು ನಿವಾಸಿ ಉಮೇಶ್ ನಾಯಕ್ (46) ಬಂಧಿತ ಆರೋಪಿ. ಈತ ಅಕ್ರಮವಾಗಿ ಕೋವಿಯನ್ನು ಹಿಡಿದುಕೊಂಡು ತಿರುಗಾಡುತಿದ್ದ ಕುರಿತು ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಆತನ ಬಳಿಯಲ್ಲಿದ್ದ ಅನಧಿಕೃತ ಎಸ್‌ಬಿಬಿಎಲ್ ಮಾದರಿಯ 1 ಕೋವಿ ಹಾಗೂ 2 ತೋಟೆ(ಮದ್ದುಗುಂಡು)ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News