ಮಂಗಳೂರು: ಅಂತಾರಾಷ್ಟೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ

Update: 2021-10-20 16:51 GMT

ಮಂಗಳೂರು, ಅ.20: ಮಂಗಳೂರು: ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾ ಮತ್ತು ಅಂಗಣ ರಂಗ ಪ್ರತಿಷ್ಠಾನ ಚಿತ್ರಾಪುರ ವತಿಯಿಂದ ’ನಾವು ವಿಶ್ವ ಸೌಹಾರ್ದ ಪ್ರಿಯರು’ ಎಂಬ ಧ್ಯೇಯ ವಾಕ್ಯದೊಂದಿಗೆ 26ನೇ ಅಂತಾರಾಷ್ಟೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಗರದ ಬೊಕ್ಕಪಟ್ನದ ಅಬ್ಬಕ್ಕ ನೌಕೆ ವಿಹಾರದಲ್ಲಿ ಇತ್ತೀಚೆಗೆ ನಡೆಯಿತು.

ಮಾಜಿ ಶಾಸಕ ಡಾ. ಮೊಯ್ದಿನ್ ಬಾವಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲೆ ಸಂಸ್ಕೃತಿ ಉಳಿಯಬೇಕಾದರೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಇಂಡಿಯನ್ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎಸ್.ಎಸ್ ನಾಯಕ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಅಧಿಕಾರಿ ಗುರುಪ್ರಸಾದ್ ಎ.ಬಿ, ಮೆಸ್ಕಾಂ ಅಧಿಕಾರಿ ಶಾಂತ ಕುಮಾರ್ ಎಚ್.ಎಂ, ಉದ್ಯಮಿ ಜಿತೇಶ್ ಉಡುಪಿ ಭಾಗವಹಿಸಿದ್ದರು.

ಈ ಸಂದರ್ಭ ಮಂಜುನಾಥ್ ಆರ್, ಡಾ.ಬಾ ನಂ ಲೊಕೇಶ್, ಪ್ರಾನ್ಸಿಸ್ ಮ್ಯಾಕ್ಸೃ್ ಮೊರಾಸ್, ಪ್ರದೀಪ್.ಡಿ, ಕೃಷ್ಣಪ್ಪಗೌಡ ಪಡ್ಡಂಬೈಲ್, ಡಾ. ಬಿ.ಆರ್. ಬಡಿಗೆರ್, ಡಾ.ಸುದರ್ಶನ್ ಎ.ವಿ. ಅವರಿಗೆ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಪತ್ರಕರ್ತ ಮತ್ತು ಸಾಹಿತಿ ಪರಮಾನಂದ ಸಾಲ್ಯಾನ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸೋಮನಿಂಗ ಎಚ್. ಹಿಪ್ಪರಾಗಿ, ಡಾ. ಬಾ ನಂ ಲೋಕೇಶ್, ಸರಿತಾ ದಾರಸಗುಪ್ಪೆ, ಪ್ರೇಮಾ ಮಂಜುನಾಥ್, ಅನ್ನಪೂರ್ಣ ಮ. ಮನ್ನಪುರ, ಶ್ರಿನಿವಾಸ್ ಚಿತ್ರಗಾರ ಕವನ ವಾಚಿಸಿದರು.

ಬೆಂಗಳೂರಿನ ಭಾವನ ಮತ್ತು ಗಣೇಶ್, ಐಶ್ವರ್ಯ, ಸಾಗರ ಸಂಗಮ ನೃತ್ಯ ತಂಡ, ವಿರಾಜ್ ಪೇಟೆಯ ನಾಟ್ಯ ಮಯೂರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪಿ.ಬಿ ಶಿವರಾಜ್ ನೇತೃತ್ವದಲ್ಲಿ ಮಂಗಳೂರು ನಗರ ಪಾಲಿಕೆಯ ಸಿಬ್ಬಂದಿ ವರ್ಗದವರು ಸಮೂಹ ಗೀತೆ ಹಾಡಿದರು. ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾದ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿದರು. ಅಂಗಣ ರಂಗ ಪ್ರತಿಷ್ಠಾನ ಅಧ್ಯಕ್ಷ ಲೀಲಾದರ್ ಬೈಕಂಪಾಡಿ ವಂದಿಸಿದರು. ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News