ಫಾದರ್ ಮುಲ್ಲರ್ ನೆಫ್ರಾಲಜಿ ವಿಭಾಗಕ್ಕೆ ಮತ್ತೆ 3 ಡಯಾಲಿಸಿಸ್ ಯಂತ್ರಗಳ ಸೇರ್ಪಡೆ

Update: 2021-10-20 16:52 GMT

ಮಂಗಳೂರು, ಅ.20: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ನೆಫ್ರಾಲಜಿಯ ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ಮತ್ತೆ ಮೂರು ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳ ಸೇರ್ಪಡೆಯಾಗಿದೆ.

ಈ ಹೊಸ ಯಂತ್ರಗಳೊಂದಿಗೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸ್ಟೇಷನ್‌ಗಳ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. ಹೊಸ ಯಂತ್ರಗಳು ನಿಪ್ರೋ ಎಂಬ ಜಪಾನಿನ ಪ್ರತಿಷ್ಠಿತ ಕಂಪನಿಯದ್ದಾಗಿದ್ದು, ಇದು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಯಂತ್ರ ವಾಗಿದೆ. ಡಯಾಲಿಸಿಸ್ ಘಟಕದಲ್ಲಿ ನೂತನ ಯಂತ್ರಗಳ ಉದ್ಘಾಟನಾ ಸಮಾರಂಭ ಮಂಗಳವಾರ ನಡೆದಿದ್ದು, ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕರಾದ ಫಾ.ರಿಚರ್ಡ್ ಕೊಯೆಲ್ಹೋ ಯಂತ್ರಗಳು ಮತ್ತು ಡಯಾಲಿಸಿಸ್ ಘಟಕವನ್ನು ಆಶೀರ್ವದಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಫಾ ರುಡಾಲ್ಫ್ ರವಿ ಡೆಸಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಮೆನೆಜಸ್, ಸಹಾಯಕ ಆಡಳಿತಾಧಿಕಾರಿಗಳಾದ ಫಾ. ನೆಲ್ಸನ್, ಫಾ. ಜೀವನ್, ಡೀನ್ ಡಾ. ಜೆ.ಪಿ. ಆಳ್ವ, ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್, ಉಪ ವೈದ್ಯಕೀಯ ಅಧೀಕ್ಷಕ ಡಾ. ಕಿಶನ್ ಶೆಟ್ಟಿ, ಭಗಿನಿ ಜ್ಯಾನೆಟ್, ಮೋಲಿ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು. ಡಾ. ಅಮಿತ್ ಡಿಸೋಜಾ ಸ್ವಾಗತಿಸಿದರು. ಡಾ. ಮಂಜುನಾಥ್ ಜೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News