ಪ್ರಧಾನಿ ಮೋದಿ ಸೂಚನೆಯ ಮೇರೆಗೆ ಅಮರಿಂದರ್ ಸಿಂಗ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧಾರ:ಎಎಪಿ

Update: 2021-10-20 17:10 GMT

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಬುಧವಾರ ಆರೋಪಿಸಿದೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದನ್ನು ತಡೆಯುವ ಬಿಜೆಪಿಯ ಕಾರ್ಯಸೂಚಿಯ ಭಾಗ ಇದಾಗಿದೆ ಎಂದು ಪಂಜಾಬ್‌ನಲ್ಲಿ ಎಎಪಿಯ ರಾಜಕೀಯ ವ್ಯವಹಾರಗಳ ಸಹ-ಉಸ್ತುವಾರಿ ರಾಘವ್ ಚಡ್ಡಾ ಅವರು ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಪಂಜಾಬಿನಲ್ಲಿ ಎಎಪಿ ಪ್ರಮುಖ ವಿರೋಧ ಪಕ್ಷವಾಗಿದೆ.

"ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲುವುದನ್ನು ತಡೆಯಲು ಹಾಗೂ  ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಅಮರಿಂದರ್  ಸಿಂಗ್ ತಮ್ಮದೇ ಪಕ್ಷವನ್ನು ರಚಿಸುತ್ತಿದ್ದಾರೆ" ಎಂದು ಚಡ್ಡಾ ಆರೋಪಿಸಿದ್ದಾರೆ.

2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿಯನ್ನು ಗೆಲ್ಲುವುದನ್ನು ನಿಲ್ಲಿಸಲು ಮೂರು ಪಕ್ಷಗಳಾದ ಬಿಜೆಪಿ, ಅಕಾಲಿದಳ ಹಾಗೂ  ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದು ಅವರು (ಮೋದಿ) ಅರ್ಥಮಾಡಿಕೊಂಡ ನಂತರ,  ಅಮರಿಂದರ್ ಸಿಂಗ್ ಮೂಲಕ ನಾಲ್ಕನೇ ಪಕ್ಷವನ್ನು ಕಣಕ್ಕಿಳಿಸುತ್ತಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News