​ಟ್ರುಥ್ ಸೋಶಿಯಲ್ : ಹೊಸ ಜಾಲತಾಣ ಘೋಷಿಸಿದ ಟ್ರಂಪ್

Update: 2021-10-21 04:02 GMT
ಡೊನಾಲ್ಡ್ ಟ್ರಂಪ್ (ಫೋಟೊ : PTI) 

ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಂತ ಸಾಮಾಜಿಕ ಜಾಲತಾಣ "ಟ್ರುಥ್ ಸೋಶಿಯಲ್"ಗೆ ಶೀಘ್ರವೇ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ.

"ಆಹ್ವಾನಿತ ಅತಿಥಿಗಳಿಗಾಗಿ" ಮುಂದಿನ ತಿಂಗಳು ಇದು ಆರಂಭವಾಗುವ ನಿರೀಕ್ಷೆ ಇದೆ.

ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ (ಟಿಎಂಟಿಜಿ) ಮಾಲಕತ್ವದ ಈ ಪ್ಲಾಟ್‌ಫಾರ್ಮ್, ಸಬ್‌ಸ್ಕ್ರಿಪ್ಷನ್ ವೀಡಿಯೊ ಆನ್ ಡಿಮ್ಯಾಂಡ್ ಸೇವೆಯನ್ನು ಕೂಡಾ ಆರಂಭಿಸಲಿದೆ ಎಂದು ಪ್ರಕಟಣೆ ಹೇಳಿದೆ.

"ನಾನು ಟ್ರುಥ್ ಸೋಶಿಯಲ್ ಪ್ಲಾಟ್‌ಫಾರ್ಮ್ ಸೃಷ್ಟಿಸಿದ್ದೇನೆ. ಟ್ವಿಟ್ಟರ್‌ನಲ್ಲಿ ಅಧಿಕ ಸಂಖ್ಯೆಯ ತಾಲಿಬಾನ್ ಬೆಂಬಲಿಗರು ಇರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ಇಷ್ಟಾಗಿಯೂ ನಿಮ್ಮ ಜನಪ್ರಿಯ ಅಮೆರಿಕ ಅಧ್ಯಕ್ಷರು ಮೌನವಾಗಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು" ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News