ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿ ಶಿಬಿರ ಉದ್ಘಾಟನೆ

Update: 2021-10-21 10:24 GMT

ಮಂಗಳೂರು ಗ್ರೂಪ್ ಹೆಡ್ ಕ್ವಾರ್ಟರ್ಸ್‍ನ ಘಟಕವಾದ 06 ಕೆಎಆರ್ ಏರ್ ಎಸ್‍ಕ್ಯೂಏನ್ ಎನ್‍ಸಿಸಿ ತನ್ನ ವಾರ್ಷಿಕ ತರಬೇತಿ ಶಿಬಿರವನ್ನು  ಅಕ್ಟೋಬರ್ 20 ರಿಂದ 29 ರವರೆಗೆ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸುತ್ತಿದೆ. ಶಿಬಿರದ ನೇತೃತ್ವವನ್ನು ಕ್ಯಾಂಪ್ ಕಮಾಂಡೆಂಟ್ ಡಬ್ಲ್ಯುಜಿ ಸಿಡಿಆರ್ ಚಂದನ್ ಗರ್ಗ್ ವಹಿಸಿದ್ದಾರೆ.

ಈ ಶಿಬಿರವು ಕೆಡೆಟ್‍ಗಳಿಗೆ 10 ದಿನಗಳ ಕಾಲ ಮಿಲಿಟರಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ತರಬೇತಿಯು ಬೆಳಗ್ಗೆ 5:30 ರಿಂದ ಸಂಜೆ 8 ಗಂಟೆಯವರೆಗೆ ನಡೆಯಲಿದೆ. ಚಟುವಟಿಕೆಗಳಲ್ಲಿ ದೈಹಿಕ ವ್ಯಾಯಾಮ, ಡ್ರಿಲ್, ವೆಪನ್ ಟ್ರೈನಿಂಗ್, ಫೈರಿಂಗ್, ಎನ್‍ಸಿಸಿ ವಿಷಯಗಳ ಮೇಲೆ ಸೈಧಾಂತಿಕ ತರಗತಿಗಳು ಮತ್ತು ವಾಯುಯಾನ ಸೇರಿವೆ. ತರಬೇತಿಯ ಕೊನೆಯಲ್ಲಿ ಒಬ್ಬ ಕೆಡೆಟ್‍ನ ಒಟ್ಟಾರೆ ವ್ಯಕ್ತಿತ್ವ ಬೆಳವಣಿಗೆಯನ್ನು ವೃದ್ಧಿಸುವ ಆಶಯವನ್ನು ಶಿಬಿರವು ಹೊಂದಿದೆ.

ಈ ಶಿಬಿರವನ್ನು ಅಕ್ಟೋಬರ್ 20ರಂದು ಎನ್‍ಸಿಸಿ ಅಧಿಕಾರಿಗಳು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತದ ಸಮ್ಮುಖದಲ್ಲಿ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News