ಧರ್ಮಸ್ಥಳ: ನೇಣುಬಿಗಿದು ಮಹಿಳೆ ಆತ್ಮಹತ್ಯೆ

Update: 2021-10-21 11:42 GMT

ಧರ್ಮಸ್ಥಳ ಗ್ರಾಮದ ಕೂಟದಕಲ್ಲು ಎಂಬಲ್ಲಿ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮೃತ ಮಹಿಳೆ ಇಲ್ಲಿನ ನಿವಾಸಿ ಮೋಹನ್ ಎಂಬವರ ಪತ್ನಿ ಸೌಮ್ಯ(29) ಎಂದು ತಿಳಿದು ಬಂದಿದೆ.

ಮಹಿಳೆಯ ಪತಿ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಮನೆಯ ಕೊಠಡಿಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾರೆ. ಇಬ್ಬರು ಪುಟ್ಟ ಮಕ್ಕಳು ಮಾತ್ರ ಮನೆಯಲ್ಲಿದ್ದರು ಎನ್ನಲಾಗಿದ್ದು, ಮಕ್ಕಳು ಅಳುವುದು ಕೇಳಿ ನೆರೆಮನೆಯವರು ಕರೆಮಾಡಿದ್ದು ಗಂಡ ಬಂದು ನೋಡಿದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಇವರು ಶಿರ್ಲಾಲು ಗ್ರಾಮದವರಾಗಿದ್ದು ಇಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಧರ್ಮಸ್ಥಳ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News