ಫಾದರ್ ಮುಲ್ಲರ್‌ ಮೆಡಿಕಲ್ ಕಾಲೇಜಿಗೆ ನ್ಯಾಕ್ ಎ ಗ್ರೇಡ್

Update: 2021-10-21 14:23 GMT

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು ನ್ಯಾಷನಲ್ ಅಸೆಸ್‍ಮೆಂಟ್ ಆ್ಯಂಡ್ ಅಕ್ರಡೇಶನ್ ಕೌನ್ಸಿಲ್- ನ್ಯಾಕ್‍ನ ಎ ಗ್ರೇಡ್ ಪ್ರಮಾಣಪತ್ರ ಪಡೆದುಕೊಂಡಿದೆ.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ನಾಲೇಜ್ ಸೆಂಟರ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ನ್ಯಾಕ್ ಎ ಗ್ರೇಡ್ ಪ್ರಮಾಣಪತ್ರವನ್ನು ಹಸ್ತಾಂತರ ಮಾಡಲಾಯಿತು.

ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಡೀನ್‍ಗಳು, ಆಡಳಿತ ಮಂಡಳಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಕಟ್ಟಕಡೆಯ ವ್ಯಕ್ತಿ ಸೇರಿ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಪರಿಶ್ರಮದಿಂದ ಎ ಗ್ರೇಡ್ ಪಡೆಯಲು ಸಾಧ್ಯವಾಗಿರುವುದು ಸಂತೋಷದ ಕ್ಷಣ ಎಂದರು.

ನಾವು ಸಾಧನೆಯ ಮೆಟ್ಟಿಲು ತುಳಿದಿದ್ದೇವೆ. ಇದನ್ನು ಉಳಿಸಿಕೊಂಡು ಮುಂದೆ ಎ ಪ್ಲಸ್‍ನಂತಹ ಇನ್ನಷ್ಟು ಸಾಧನೆ ಮಾಡಲಿದ್ದೇವೆ. ಮೆಡಿಕಲ್ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆಸ್ಪತ್ರೆಯಲ್ಲಿ  ಮಾನವೀಯ ಚಿಕಿತ್ಸೆ ನೀಡುವುದು ನಮ್ಮ ಗುರಿ. ನಮ್ಮ ಸಿಬ್ಬಂದಿಗಳಿಂದ ವೃತ್ತಿಪರತೆ, ಜ್ಞಾನ ಮತ್ತು ವಿಶ್ವಾಸದ ಸೇವೆಯನ್ನು ನಾವು ನೀಡುತ್ತಿದ್ದೇವೆ. ಗುಣಮಟ್ಟದ ಸೇವೆಯಲ್ಲಿ ರಾಜಿ ಮಾತೇ ಇಲ್ಲ. ಪ್ರತಿಕ್ರಿಯೆಗಳಿಗೆ ಅವಕಾಶ ನೀಡದೆ ಸ್ಪಂದನಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾದರ್ ರುಡಾಲ್ಫ್ ರವಿ ಡೇಸ, ಸಹಾಯಕ ಆಡಳಿತಾಧಿಕಾರಿ ಫಾದರ್ ನೆಲ್ಸನ್ ಪಾಯಸ್,  ಡೀನ್ ಡಾ.ಬಿ.ಸಂಜೀವ ರೈ, ಫಾದರ್ ಜೀವನ್, ಪ್ರಾಧ್ಯಾಪಕ ಡಾ.ಹರೀಶ್ ಶಿವು ಗೌಡ, ಡಾ.ಆ್ಯಂಟನಿ, ಡಾ.ಉದಯ್, ಡಾ.ಕಿಶನ್, ಸಿಸ್ಟರ್ ಜಾನೆಟ್ ಮತ್ತಿತರರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜಯಪ್ರಕಾಶ್ ಆಳ್ವ ಸ್ವಾಗತಿಸಿದರು. ಉಪ ಡೀನ್ ಡಾ.ರಮೇಶ್ ಭಟ್ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಕಾರಿ ಫಾದರ್ ಅಜಿತ್ ಬಿ.ಮಿನೇಜಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News