ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ: ಕುಯಿಲಾಡಿ ಸುರೇಶ್ ನಾಯಕ್

Update: 2021-10-21 13:10 GMT

ಉಡುಪಿ, ಅ.21: ವಿಶ್ವದ ಅತೀ ದೊಡ್ಡ ಕೋವಿಡ್ ಲಸಿಕಾ ಅಭಿಯಾನದಲ್ಲಿ ಅ.21ರಂದು ಒಟ್ಟು 100 ಕೋಟಿ ಡೋಸ್ ಲಸಿಕೆ ವಿತರಣೆಯನ್ನು ಪೂರೈಸಿ ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಮಹತ್ಕಾರ್ಯದ ನೇತೃತ್ವ ವಹಿಸಿ ಅಭಿಯಾನದ ಯಶಸ್ಸಿಗೆ ಹಗಲಿರುಳು ಶ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಾಧನೆಯ ಅಭಿನಂದನೆ ಸಲ್ಲಬೇಕು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಕ್ರಮದ ಸಾಧನೆಯಲ್ಲಿ ಪಾಲುದಾರರಾದ ದೇಶದ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿಗಳು, ಜಿಲ್ಲಾಡಳಿತ, ಅಧಿಕಾರಿ ವರ್ಗ, ಆಶಾ ಕಾರ್ಯಕರ್ತೆ ಯರು, ಸ್ವಯಂ ಸೇವಕರು ಹಾಗೂ ಲಸಿಕೆ ವಿತರಣೆಗೆ ಸಹಕರಿಸಿರುವ ಸಮಾಜ ಸೇವಾ ಸಂಘ-ಸಂಸ್ಥೆಗಳಿಗೆ ಜಿಲ್ಲಾ ಬಿಜೆಪಿ ವತಿಯಿಂದ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News