ಆಸ್ಕರ್ ಫೆರ್ನಾಂಡಿಸ್‌ರ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ: ರಮಾನಾಥ ರೈ

Update: 2021-10-21 16:37 GMT

ಉಡುಪಿ, ಅ.21: ಅವಿಭಜಿತ ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮಾಡಿ ದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ. ರಾಜಕೀಯ ಎದುರಾಳಿಗಳನ್ನು ವೈರಿಗಳಂತೆ ಕಾಣದೆ, ಅವರೆಲ್ಲರನ್ನು ಪ್ರೀತಿಸಿದ ಆಸ್ಕರಣ್ಣ, ದೇಶದಲ್ಲಿ ಹಲವಾರು ನಾಯಕರನ್ನು ಸಾರ್ವಜನಿಕ ಜೀವನದಲ್ಲಿ ಬೆಳೆಸಿದವರು ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.

ದಿ. ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ನಡೆದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ದೀರ್ಘಾವಧಿ ರಾಜಕೀಯ ನಾಯಕನಾಗಿ ಪ್ರಜ್ವಲಿಸಿದವರು ಆಸ್ಕರ್ ಫೆರ್ನಾಂಡಿಸ್ ದೆಹಲಿಯ ತನ್ನ ಕಚೇರಿಯಲ್ಲಿ ತಡರಾತ್ರಿಯವರೆಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಆಸ್ಕರ್ ಸಮಸ್ತ ಜನಪ್ರತಿನಿಧಿಗಳಿಗೆ ಪ್ರೇರಣೆ. ಆಸ್ಕರ್ ಫೆರ್ನಾಂಡಿಸ್ ಮಾನವೀಯ ನೆಲೆ ಅವರ ಮೇಲೆ ನನಗೆ ಪ್ರೇರಣೆಯಾಗಲು ಕಾರಣ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದಿವಂಗತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಅಧ್ಯಕ್ಷ ರೊನಾಲ್ಡ್ ಮನೋಹರ್ ಕರ್ಕಡ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ.ವಂ.ಫಾ.ಸ್ಟ್ಯಾನಿ ಬಿ.ಲೋಬೊ, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಚಂದ್ರಶೇಖರ್, ನಾಗೇಶ್ ಕುಮಾರ್ ಉದ್ಯಾವರ, ಎಂ.ಎ.ಗಪೂರ್, ಬಿಪಿನ್ ರಾವ್, ಆಸ್ಕರ್ ಫೆರ್ನಾಂಡಿಸ್ ಅವರ ಸೊಸೆ ಫ್ರೆಜಿಲ್ ಫೆರ್ನಾಂಡಿಸ್ ನುಡಿನಮನ ಸಲ್ಲಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ನವೀನ್ ಡಿಸೋಜ, ವಂ.ಫಾ.ವಿಲಿಯಂ ಮಾರ್ಟಿಸ್, ದಿನೇಶ್ ಪುತ್ರನ್, ಡೆರಿಕ್ ಡಿಸೋಜ, ನವೀನ್‌ಚಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಮೇರಿ ಡಿಸೋಜ, ಹರೀಶ್ ಶೆಟ್ಟಿ, ರೋಶನಿ ಒಲಿವೆರಾ, ಅನಿತಾ ಡಿಸೋಜಾ, ದೀಪಕ್ ಹೆಗ್ಡೆ, ಮೇರಿ ಡಿಸೋಜಾ, ನೇರಿ ಕರ್ನೇಲಿಯೊ, ಅರ್ವಿಂದ್ ಫೆರ್ನಾಂಡಿಸ್, ರೋಯ್ಡನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ನಿವೃತ್ತ ಧರ್ಮಗುರು ವಂ.ಫಾ.ಝೇವಿಯರ್ ಪಿಂಟೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ನಡೆಯಿತು. ಮಾಜಿ ಶಾಸಕ ಜೆ.ಆರ್.ಲೋಬೊ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಸಂಘಟಕ ಮುಹಮ್ಮದ್ ಶ್ರೀಶ್ ಸ್ವಾಗತಿಸಿದರು. ಸಂಚಾಲಕ ಸ್ಟೀವನ್ ಕುಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆಲ್ವಿನ್ ದಾಂತಿ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News