ಉಡುಪಿ: 'ಪಾರ್ಟ್‌ಟೈಮ್ ಜಾಬ್' ಹೆಸರಿನಲ್ಲಿ ವಂಚನೆ; ಪ್ರಕರಣ ದಾಖಲು

Update: 2021-10-21 16:40 GMT

ಉಡುಪಿ, ಅ.21: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.19ರಂದು ಕೆ.ಅರ್ಚನಾ ನಾಯಕ್ ಎಂಬವರ ಮೊಬೈಲ್ಗೆ ಪಾರ್ಟ್ ಟೈಮ್ ಜಾಬ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಅದರಂತೆ ಅವರು ನೋಂದಣಿ ಮಾಡಿಕೊಂಡಿದ್ದರು. ಆ ಕಂಪೆನಿಯಲ್ಲಿ ಒಂದು ಸ್ವತ್ತು ಖರೀದಿ ಮಾಡಿ, ಅದನ್ನು ಕಂಪೆನಿಯವರು ಆನ್ಲೈನ್ ಮೂಲಕ ಮಾರಾಟ ಮಾಡಿದ್ದಲ್ಲಿ ಅಸಲು ಮೊತ್ತ ಹಾಗೂ ಅದಕ್ಕೆ ಕಮಿಶನ್ ಪಡೆಯುವುದು ಟಾಸ್ಕ್ ನೀಡಿದ್ದರು ಎನ್ನಲಾಗಿದೆ.

ಅದರಂತೆ ಅರ್ಚನಾ ಕಂಪೆನಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದ ಯೂಸರ್ ಐ.ಡಿ.ಯನ್ನು ಬಳಸಿ, ಒಟ್ಟು 1,06,900ರೂ. ಮೌಲ್ಯದ ಸೊತ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಿದ್ದರು. ಆದರೆ ಕಂಪೆನಿಯವರು ನೀಡಿದ ಹಣ ಹಾಗೂ ಲಾಭಾಂಶವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News