ಅ.23ರಂದು ಮೂಲರಪಟ್ನದಲ್ಲಿ ಸಿರಾಜುದ್ದೀನ್ ಖಾಸಿಮಿಯಿಂದ ಏಕದಿನ ಮತ ಪ್ರಭಾಷಣ: ನೌಶಾದ್ ಹಾಜಿ ಸೂರಲ್ಪಾಡಿ

Update: 2021-10-21 16:51 GMT

ಬಂಟ್ವಾಳ, ಅ.21: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ನವೀಕರಣ ಹಾಗೂ ಮೀಲಾದುನ್ನಬಿ ಪ್ರಯುಕ್ತ ಕೇರಳದ ಪ್ರಸಿದ್ಧ ವಾಗ್ಮಿ ಅಲ್ ಹಾಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಅವರ ಏಕ ದಿನ ಮತ ಪ್ರಭಾಷಣ ಅ.23ರಂದು ರಾತ್ರಿ ಮೂಲರಪಟ್ನ ಮೈದಾನದಲ್ಲಿ ನಡೆಯಲಿದೆ ಎಂದು ಯುವ ಉದ್ಯಮಿ, ಸಮಾಜ ಸೇವಕ ನೌಷಾದ್ ಹಾಜಿ ಸೂರಲ್ಪಾಡಿ ಹೇಳಿದರು. 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.23ರಂದು ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಯು.ಟಿ.ಖಾದರ್, ಬಿ.ಝೆಡ್.ಝಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮವನ್ನು ಎಂ.ಜೆ.ಎಂ. ಖತೀಬರಾದ ಅಬ್ದುಸಲಾಂ ಯಮಾನಿ ತುಂಬೆ ಉದ್ಘಾಟಿಸಲಿದ್ದು, ಎಂ.ಜೆ.ಎಂ. ಅಧ್ಯಕ್ಷ ಎಂ.ಬಿ.ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನಿಸ್ ಕೌಸರಿ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉಪಸ್ಥಿತಲಿರುವರು ಎಂದು ಹೇಳಿದರು. 

ಈ ಬೃಹತ್ ಕಾರ್ಯಕ್ರಮದ ಪ್ರಯುಕ್ತ ಮೂಲರಪಟ್ನ ಸೇತುವೆ ಆ ದಿನ ವಾಹನಗಳ ಸಂಚಾರಕ್ಕೆ ಮುಕ್ತವಾಗಿರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಮೂಲರಪಟ್ನ ಮಸೀದಿ ಅಧ್ಯಕ್ಷ ಎಂ.ಬಿ.ಅಶ್ರಫ್, ಬಡಗಬೆಳ್ಳೂರು ಬಾಲಿಕೆ ಮಸ್ಜಿದ್ ಇಮಾಂ ಶಿಬ್ಲಿ ಇದರ ಅಧ್ಯಕ್ಷ ಬಿ.ಎಚ್.ಅಶ್ರಫ್, ಜಿ.ಎಚ್.ಎಂ. ಫೌಂಡೇಶನ್ ನ ಅಧ್ಯಕ್ಷ ಎಂ.ಎಸ್.ಶಾಲಿ, ಫರ್ವೇಝ್, ಸಜೀಯುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News