ಅ.22ರಂದು ದ.ಕ. ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಮೇಳ

Update: 2021-10-21 16:59 GMT

ಮಂಗಳೂರು, ಅ.21: ಇದೇ ಅ.22ರಂದು ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಸರಕಾರಿ ಆರೋಗ್ಯ ಸಂಸ್ಥೆಗಳು ಹಾಗೂ ಆ ಸಂಸ್ಥೆಗಳ ವ್ಯಾಪ್ತಿಯ 400ಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಲಸಿಕೀಕರಣ ನಡೆಯಲಿದೆ.

ಜಿಲ್ಲೆಯಲ್ಲಿ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳು ಲಭ್ಯವಿದ್ದು, ಇದೂವರೆಗೂ ಲಸಿಕೆ ಪಡೆಯದವರು ಮೊದಲನೆ ಡೋಸ್ ಹಾಗೂ ಎರಡನೆಯ ಡೋಸ್ ಪಡೆಯಬೇಕಾದವರು ಲಸಿಕೆ ಪಡೆಯುವ ಮೂಲಕ ಈ ಮೇಳವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅಂತರ 84 ದಿನ ಹಾಗೂ ಕೋವಾಕ್ಸಿನ್ ಲಸಿಕೆಯ ಎರಡನೇ ಡೋಸ್‌ನ ಅಂತರ 28 ದಿನಗಳಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News