ಮಂಗಳೂರು ಧರ್ಮಪ್ರಾಂತ: ಸಿನೊಡಲ್ ಪ್ರಕ್ರಿಯೆ ಕುರಿತು ಅಧ್ಯಯನ ಅಧಿವೇಶನ

Update: 2021-10-21 17:14 GMT

ಮಂಗಳೂರು,ಅ.21: ಪೋಪ್ ಫ್ರಾನ್ಸಿಸ್ ಆರಂಭಿಸಿದ ಸಿನೊಡಲ್-2023ರ ಪ್ರಕ್ರಿಯೆಯ ಭಾಗವಾಗಿ ಮಂಗಳೂರು ಧರ್ಮಪ್ರಾಂತದಲ್ಲಿ ಸಿನೋಡಲ್‌ನ ಅಧ್ಯಯನ ಅಧಿವೇಶನವು ಗುರುವಾರ ಉರ್ವ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ನಲ್ಲಿ ನಡೆಯಿತು.

ಇದೇ ವೇಳೆ ಧರ್ಮಾಪ್ರಾಂತದ ಪಾಲನ ಪರಿಷತ್ತು (ಡಯೋಸಿಸನ್ ಪ್ಯಾಸ್ಟರಲ್‌ಕೌನ್ಸಿಲ್)ನ ಸುವರ್ಣ ಮಹೋತ್ಸವದ ಆಚರಣೆಗೆ ಚಾಲನೆ ನೀಡಲಾಯಿತು.

ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ ಸಿನೊಡಾಲಿಟಿಯ ಸ್ವರೂಪದ ಬಗ್ಗೆ ಮಾತನಾಡಿದರು. ಬಿಜೈಯ ಚರ್ಚಿನ ಧರ್ಮಗುರು ವಂ.ಗುರು ಜಾನ್ ಬ್ಯಾಪ್ಟಿಸ್ಟ್ ಸಲ್ಡಾನ್ಹಾ, ಧರ್ಮಾಪ್ರಾಂತದ ಪಾಲನ ಪರಿಷತ್ತಿನ ಮಾಜಿ ಕಾರ್ಯದರ್ಶಿ ನ್ಯಾಯವಾದಿ ಎಂಪಿ ನೊರೊನ್ಹಾ ಸಿನೊಡಲ್ ಕುರಿತು ಮಾತನಾಡಿದರು.

ಪರಿಷತ್ತಿನ ಕಾರ್ಯದರ್ಶಿ ಡಾ,ಜಾನ್ ಡಿಸಿಲ್ವಾ ಸಂವಾದ ನಿರ್ವಹಿಸಿದರು.

ಪ್ಯಾರಿಷ್‌ಗಳು ಮತ್ತು ಸಂಸ್ಥೆಗಳಲ್ಲಿ ಸಮಾಲೋಚನೆ, ಚರ್ಚೆಯನ್ನು ನವೆಂಬರ್/ಡಿಸೆಂಬರ್‌ನಲ್ಲಿ ನಡೆಸಲಾಗುವುದು ಎಂದು ಸಿನೋಡ್ ಪ್ರಕ್ರಿಯೆಯ ಕಾರ್ಯಕಾರಿ ವಂ.ಜೋಸೆಫ್ ಮಾರ್ಟಿಸ್ ಹೇಳಿದರು.

ಧರ್ಮಕೇತ್ರದ ಶ್ರೇಷ್ಟಗುರು ಅ.ವಂ. ಮ್ಯಾಕ್ಸಿಮ್ ಎಲ್.ನೊರೊನ್ಹ ಸ್ವಾಗತಿಸಿದರು. ಜೀನ್ ಲವಿನಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News