ಬಿಜೆಪಿ ನಾಯಕರ ಸಮ್ಮುಖದಲ್ಲೇ ʼಅಲ್ಪಸಂಖ್ಯಾತರ ತಲೆ ಕತ್ತರಿಸುವʼ ಹೇಳಿಕೆ ನೀಡಿದ ಸ್ವಾಮಿ ಪರಮಾತ್ಮಾನಂದ

Update: 2021-10-22 10:29 GMT

ಹೊಸದಿಲ್ಲಿ:  ಹಿಂದುಗಳನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಛತ್ತೀಸಗಢದ ಸುರ್ಗುಜ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸ್ವಾಮಿ ಪರಮಾತ್ಮಾನಂದ ಅವರು ಬಲವಂತದ ಮತಾಂತರದ ಪ್ರಕರಣದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹತ್ಯೆಗೈಯ್ಯಬೇಕೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

"ನಾನೊಬ್ಬ ಸಂತ, ಅದರ ಪರಿವೆ ನನಗಿಲ್ಲ, ನಾನು ನಿಮಗೆ ಸ್ಪಷ್ಟವಾಗಿ  ಹೇಳುತ್ತಿದ್ದೇನೆ. ಮನೆಯಲ್ಲಿ ಒಂದು ಲಾಠಿ ಇಟ್ಟುಕೊಳ್ಳಿ.... ನಮ್ಮ ಹಳ್ಳಿಗಳಲ್ಲಿ ಜನರು ಕೈ ಕೊಡಲಿಗಳನ್ನು ಇಟ್ಟುಕೊಳ್ಳುತ್ತಾರೆ. ಅದನ್ನೇಕೆ ಇಟ್ಟುಕೊಳ್ಳುತ್ತಾರೆ. ಅವರೇಕೆ ಫರ್ಸ ಇಟ್ಟುಕೊಳ್ಳುತ್ತಾರೆ? ಅವರ ತಲೆ ಕತ್ತರಿಸಿ... ಮತಾಂತರಕ್ಕೆ ಬರುವವರನ್ನು. ನಾನು ಸಂತನಾಗಿದ್ದರೂ ದ್ವೇಷ ಹರಡುತ್ತಿದ್ದೇನೆ ಎಂದು ನೀವು ಹೇಳಬಹುದು. ಆದರೆ ಕೆಲವೊಮ್ಮೆ ಬೆಂಕಿ ಹತ್ತಿಸುವುದು ಮುಖ್ಯ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮ  ಮನೆ, ರಸ್ತೆ, ನೆರೆಹೊರೆ, ಗ್ರಾಮಕ್ಕೆ ಯಾರಾದರೂ ಬಂದರೆ ಅವರನ್ನು ಕ್ಷಮಿಸಬೇಡಿ" ಎಂದು ಸ್ವಾಮಿ ಪರಮಾತ್ಮಾನಂದ ಹೇಳಿದ್ದಾಗಿ thewire.in ವರದಿ ಮಾಡಿದೆ.

"ಹೋದ (ಮತಾಂತರಗೊಂಡ) ಕ್ರೈಸ್ತರಿಗೆ ನಾನು ಹೇಳಬಯಸುತ್ತೇನೆ. ಬಾವಿಗಾಗಿ ನೀವೇಗೆ ಸಮುದ್ರವನ್ನು ತೊರೆದಿರಿ. ಅವರ ಬಳಿ ಮೊದಲು ಸೌಜನ್ಯದಿಂದ ಮಾತನಾಡಿ. ನಿಲ್ಲಿಸಿ. ರೋಕೋ (ನಿಲ್ಲಿಸಿ), ಫಿರ್ ಟೋಕೋ(ವಿರೋಧಿಸಿ), ಫಿರ್ ಥೋಕೋ (ಗುಂಡಿಕ್ಕಿ)" ಎಂದು ಅವರು ಹೇಳಿದರು.

ಅವರು ಈ ರೀತಿ ಮಾತನಾಡುವಾಗ ವೇದಿಕೆಯಲ್ಲಿ ಛತ್ತೀಸಗಢದ ಪ್ರಮುಖ ಬಿಜೆಪಿ ನಾಯಕರುಗಳಾದ ರಾಮವಿಚಾರ್ ನೇತಂ, ನಂದ ಕುಮಾರ್ ಸಾಯಿ ಹಾಗೂ ಬಿಜೆಪಿ ವಕ್ತಾಋ ಅನುರಾಗ್ ಸಿಂಗ್ ದಿಯೋ ಇದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News