×
Ad

​ಮಂಗಳೂರು: ವಾಹನ ಸಂಚಾರ ಮಾರ್ಗದಲ್ಲಿ ಮಾರ್ಪಾಡು

Update: 2021-10-22 21:39 IST

ಮಂಗಳೂರು, ಅ.22: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾರದಾ ಸ್ಕೂಲ್ ರಸ್ತೆಯಿಂದ (ಎಸ್‌ಬಿಐ ಸರ್ಕಲ್ ಹತ್ತಿರದಿಂದ) ಜೈಲ್ ರಸ್ತೆವರೆಗೆ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಡಿಸಲಾಗಿದೆ.

ಶಾರದಾ ಸ್ಕೂಲ್ ರಸ್ತೆಯಿಂದ (ಎಸ್‌ಬಿಐ ಸರ್ಕಲ್ ಹತ್ತಿರ) ಬಿ.ಜಿ. ಸ್ಕೂಲ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಶಾರದಾ ಸ್ಕೂಲ್ ಮುಂಭಾಗದಿಂದ ನವಭಾರತ್ ಸರ್ಕಲ್ ಮೂಲಕ ಸಂಚರಿಸುವುದು.

ಬಿ.ಜಿ. ಸ್ಕೂಲ್ ಜಂಕ್ಷನ್‌ನಿಂದ ಜೈಲ್ ರೋಡ್‌ನಲ್ಲಿ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪಿವಿಎಸ್ ಜಂಕ್ಷನ್/ ಕರಂಗಲ್ಪಾಡಿ ಜಂಕ್ಷನ್/ ಪಿಂಟೋ ಲೇನ್‌ರಸ್ತೆ/ ಕೋಡಿಯಾಲ್‌ಗುತ್ತು ಜಂಕ್ಷನ್ ಮೂಲಕ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News