ಬೆಳ್ಳಾರೆ ಮಸೀದಿಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ಪ್ರಕರಣ ದಾಖಲು

Update: 2021-10-22 16:43 GMT

ಬೆಳ್ಳಾರೆ ಮಸೀದಿಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಇತ್ತಂಡಗಳ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಶುಕ್ರವಾರ ನಡೆದಿದೆ.

ಬೆಳ್ಳಾರೆ ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಅರ್ಜಿ ಕೊಡುವ ವಿಷಯದಲ್ಲಿ ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಝರುದ್ದೀನ್, ಜಮಾಲುದ್ದೀನ್ ಕೆ.ಎಸ್., ಅಬ್ದುಲ್ ಜಮಾಲ್ ಇವರ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಯಿತೆನ್ನಲಾಗಿದೆ.

ಗಾಯಗೊಂಡ ಅಝರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದು ಹೈದರಾಲಿ ಮತ್ತು ಆಸಿರ್ ಪುತ್ತೂರಿನ  ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಎರಡೂ ಕಡೆಯವರು ಪೊಲೀಸು ದೂರು ನೀಡಿದ್ದು ಇತ್ತಂಡದ ಮೇಲೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News