ಭಟ್ಕಳದ ಪುರಸಭೆ ಅಧ್ಯಕ್ಷ, ತಹಶೀಲ್ದಾರ್, ಸಹಾಯಕ ಆಯುಕ್ತೆ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯನ್ವಯ ದೂರು

Update: 2021-10-22 17:24 GMT

ಭಟ್ಕಳ: ಇಲ್ಲಿನ ಪುರಸಭಾ ಅಧ್ಯಕ್ಷ ಪರ್ವೇಝ್ ಕಾಶಿಮಜಿ ಸೇರಿದಂತೆ ತಹಶೀಲ್ದಾರ್ ರವಿಚಂದ್ರ, ಸಹಾಯಕ ಆಯುಕ್ತೆ ಮಮತಾ ದೇವಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ರಾಧಿಕಾ ಎಂಬುವರರ ವಿರುದ್ಧ ಪ.ಜಾ, ಪ.ಪಂ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇಲಿನ ವ್ಯಕ್ತಿಗಳ ವಿರುದ್ಧ ದೂರನ್ನು ನೀಡಿರುವ ಹಿಂದೂ ಕಾಲನಿಯ ನಿವಾಸಿ ದಿನೇಶಬಾಬು ಪಾವಸ್ಕರ, ತಾನು ಚಮಗಾರ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಅ.18 ರಂದು ಭಟ್ಕಳ ಪುರಸಭೆಯಲ್ಲಿ ನಡೆದ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪರಿಶಿಷ್ಟರಿಗೆ ಮೀಸಲಾಗಿಟ್ಟುರುವ ಮಳಿಗೆಗಳನ್ನು ಸುಳ್ಳು ಜಾತಿಪ್ರಮಾಣ ಸಲ್ಲಿಸಿದವರಿಗೆ ಅವಕಾಶ ನೀಡಿದ್ದು ನೈಜಪರಿಶಿಷ್ಟರಿಗೆ ಅನ್ಯಾಯವಾಗುತ್ತಿದ್ದು ಇದು ಕಾನೂನುಬಾಹಿರ  ಎಂದು ಪ್ರಶ್ನಿಸಿದ್ದಕ್ಕೆ ಆರೋಪಿ ಪರ್ವೇಝ್ ಕಾಶಿಂಜಿ ನನ್ನನ್ನು ಉದ್ದೇಶಿಸಿ ಕಾನೂನು ಬಾಹಿರವೆಂದು ಹೇಳಲು ನೀನು ಯಾರು ನೀನೇನು ಸುಪ್ರೀಂ ಕೋರ್ಟ್ ಜಡ್ಜಾ ಎಂದು ಸಾರ್ವಜನಿಕರೆದುರು ನನ್ನನ್ನು ಅವಮಾನಿಸಿದ್ದಾರೆ. ಇದಕ್ಕೆ ಮೂಕಪ್ರೇಕ್ಷಕರಂತೆ ಕುಳಿತುಕೊಂಡಿದ್ದ ಆರೋಪಿ ಉಪವಿಭಾಗಾಧಿಕಾರಿ, ತಹಶೀಲ್ದಾರರು ಮತ್ತು ಪುರಸಭೆ ಮುಖ್ಯಾಧಿಕಾರಿ ಕರ್ತವ್ಯಲೋಪ ಎಸಗಿದ್ದು ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ಹೊಂದಿದವರಿಗೆ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಒಬ್ಬ ಪರಿಶಿಷ್ಟ ಜಾತಿಯವನು ಮಾಡಬಹುದಾದ ವ್ಯಾಪರ ವ್ಯವಹಾರಕ್ಕೆ ಅಡ್ಡಿಪಡಿಸಿ ದೌರ್ಜನ್ಯ ವೆಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಭಟ್ಕಳ ನಗರಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News