ಫೈಝಾಬಾದ್ ರೈಲ್ವೆ ಜಂಕ್ಷನ್ ಅನ್ನು ಅಯೋಧ್ಯೆ ಕಂಟೋನ್ಮೆಂಟ್ ಎಂದು ಮರುನಾಮಕರಣಕ್ಕೆ ನಿರ್ಧಾರ

Update: 2021-11-03 06:22 GMT

ಲಕ್ನೋ,ಅ.23: ಫೈಝಾಬಾದ್ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಕಚೇರಿಯು ಶನಿವಾರ ಟ್ವೀಟಿಸಿದೆ.
 ‌
ಮುಖ್ಯಮಂತ್ರಿಗಳ ನಿರ್ಧಾರದಂತೆ ಫೈಝಾಬಾದ್ ರೈಲ್ವೆ ನಿಲ್ದಾಣವನ್ನು ಇನ್ನು ಮುಂದೆ ಅಯೋಧ್ಯಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಎಂದು ಕರೆಯಲಾಗುವುದು ಎಂದು ಟ್ವೀಟ್ ತಿಳಿಸಿದೆ.

2018ರಲ್ಲಿ ಆದಿತ್ಯನಾಥ ಸರಕಾರವು ಫೈಝಾಬಾದ್ ಅನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿತ್ತು. ರಾಜ್ಯದ ಬಿಜೆಪಿ ಸರಕಾರವು ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಮತ್ತು ಮುಘಲ್ಸರಾಯ್ ರೈಲ್ವೆ ಜಂಕ್ಷನ್ ಅನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಎಂದೂ ಬದಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News