ಮೂಳೂರು: ಕಾರು ಢಿಕ್ಕಿ; ಪಾದಚಾರಿ ಮಹಿಳೆ ಮೃತ್ಯು

Update: 2021-10-23 12:03 GMT

ಕಾಪು : ನಡೆದು ಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟ ಘಟನೆ ಮೂಳೂರಿನಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.

ಮೂಳೂರು ಪಡು ನಿವಾಸಿ ಆಯಿಶಾ (42) ಮೃತರು ಎಂದು ಗುರುತಿಸಲಾಗಿದ್ದು, ಅವರು ಅಗತ್ಯ ವಸ್ತು ಖರೀದಿಸಲು ಪೇಟೆ ಬಂದು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೂಳೂರು ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ಮಂಗಳೂರಿನತ್ತ ಹೋಗುತ್ತಿದ್ದ ಕಾರೊಂದು ಡಿಕ್ಕಿಯಾಗಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News