×
Ad

ಕಿತ್ತೂರು ಚೆನ್ನಮ್ಮ ಮಹಿಳೆಯರಿಗೆಲ್ಲಾ ಮಾದರಿ : ಸದಾಶಿವ ಪ್ರಭು

Update: 2021-10-23 19:15 IST

ಉಡುಪಿ, ಅ.23: ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ಮತ್ತು ದಿಟ್ಟತನ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಮಾದರಿಯಾಗ ಬೇಕು’ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತಿದ್ದರು. ಸಮಾಜದ ಒಳಿತಿಗಾಗಿ ಹೋರಾಡಿದ ಧೀರ ಮಹಿಳೆ ರಾಣಿ ಚೆನ್ನಮ್ಮನ ತ್ಯಾಗ ಬಲಿದಾನವನ್ನು ಶ್ಲಾಘನೆ ಮಾಡುವ ಮೂಲಕ ಮಕ್ಕಳಲ್ಲಿ ಸಾಧನೆಯ ಛಲವನ್ನು ತುಂಬಬೇಕು ಎಂದರು.

ಚಿತ್ರಕಲಾ ಮಂದಿರದ ನಿರಂಜನ್ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕಿರಿಯರಿಂದ ಹಿರಿಯರಿಗೆ ಸಂಚಲನ ಮೂಡಿ ಸುವಂಥ ಅಪ್ರತಿಮ ವೀರ ಮಹಿಳೆ. ಅರು ಕರ್ನಾಟಕದ ಹೆಮ್ಮೆ ಎಂದರು.

ಚಿತ್ರಕಲಾ ಮಂದಿರದ ನಿರಂಜನ್ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕಿರಿಯರಿಂದ ಹಿರಿಯರಿಗೆ ಸಂಚಲನ ಮೂಡಿಸುವಂಥ ಅಪ್ರತಿಮ ವೀರ ಮಹಿಳೆ. ಅವರು ಕರ್ನಾಟಕದ ಹೆಮ್ಮೆ ಎಂದರು. ಜಿಪಂನ ಉಪಕಾರ್ಯದರ್ಶಿ ಕಿರಣ ಪಡ್ನೇಕರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಉಡುಪಿ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಉಮಾಪತಿ, ಬಿಸಿಎಂ ಇಲಾಖೆಯ ಉಪನಿರ್ದೇಶಕ ಜಗದೀಶ್‌ಶೆಟ್ಟರ್, ಬಸವ ಸಮಿತಿ ಕಾರ್ಯದರ್ಶಿ ಸುರೇಶ್, ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ. ಪ್ರಶಾಂತ್ ಶೆಟ್ಟಿ, ಚಿತ್ರಕಲಾ ಮಂದಿರದ ಸದಸ್ಯರಾದ ಮನೋಜ್, ಗೌತಮ್ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News