ಎಸ್ಕೆಪಿಎ ಉಡುಪಿ ವಲಯಾಧ್ಯಕ್ಷರಾಗಿ ಜನಾರ್ದನ್ ಕೊಡವೂರು ಅಧಿಕಾರ ಸ್ವೀಕಾರ
Update: 2021-10-23 21:46 IST
ಉಡುಪಿ, ಅ.23: ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲಾ ವಲಯಾಧ್ಯಕ್ಷರಾಗಿ ಜನಾರ್ದನ್ ಕೊಡವೂರು ಅಧಿಕಾರ ಸ್ವೀಕರಿಸಿದರು.
ಇತ್ತೀಚೆಗೆ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ 31ನೇ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿಗಾರ್ ನೂತನ ತಂಡಕ್ಕೆ ಪದಗ್ರಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕೋಶಾಧಿಕಾರಿ ಆನಂದ ಬಂಟ್ವಾಳ, ಉಡುಪಿ ವಲಯದ ಕಾರ್ಯದರ್ಶಿ ಪ್ರವೀಣ್ ಕೊರೆಯ, ಕೋಶಾಧಿಕಾರಿ ಪ್ರಸಾದ್ ಜತ್ತನ್, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ಸುಕೇಶ್ ಅಮೀನ್ ಉಪಸ್ಥಿತರಿದರು.