×
Ad

ಸಿರಿಯ: ಅಮೆರಿಕ ಪಡೆಗಳಿಂದ ಅಲ್ ಖಾಯ್ದಾ ಮುಖಂಡನ ಹತ್ಯೆ

Update: 2021-10-23 23:59 IST

ವಾಶಿಂಗ್ಟನ್,ಅ.24: ವಾಯವ್ಯ ಸಿರಿಯದಲ್ಲಿ ಶುಕ್ರವಾರ ನಡೆದ ವಾಯುದಾಳಿಯಲ್ಲಿ ಅಲ್ ಖಾಯಿದಾ ಗುಂಪಿನ ಹಿರಿಯ ನಾಯಕ ಅಬ್ದುಲ್ ಹಾಮೀದ್ ಅಲ್ ಮತರ್ನನ್ನು ತಾನು ಹತ್ಯೆಗೈದಿರುವುದಾಗಿ ಅಮೆರಿಕ ಸೇನೆಯು ಶುಕ್ರವಾರ ತಿಳಿಸಿದೆ.

ಅಮೆರಿಕ ಸೆಂಟ್ರಲ್ ಕಮಾಂಡ್‌ ನ ವಕ್ತಾರ ಆರ್ಮಿ ಮೇಜರ್ ಜಾನ್ ರಿಗ್ಸ್ಬಿ ಅವರು ತಿಳಿಸಿದ್ದಾರೆ.

ಅಲ್-ಮತರ್ನ ಹತ್ಯೆಯೊಂದಿಗೆ ಅಮೆರಿಕದ ನಾಗರಿಕರು, ನಮ್ಮ ಪಾಲುದಾರು ಹಾಗೂ ಅಮಾಯನ ನಾಗರಿಕರಿಗೆ ಬೆದರಿಕೆಯಾಗಿರುವ ಸಂಚುಗಳನ್ನು ರೂಪಿಸುವ ಹಾಗೂ ಜಾಗತಿಕ ದಾಳಿಗಳನ್ನು ನಡೆಸುವ ಅಲ್ ಖಾಯ್ದ ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ ಎಂದು ರಿಗ್ಸ್ಬಿ ಹೇಳಿದ್ದಾರೆ. ಸಿರಿಯ, ಇರಾಕ್ ಹಾಗೂ ಅದರಾಚೆಗಿನ ದೇಶಗಳಿಗೆ ಬೆದರಿಸಲು ಅಲ್ಖಾಯ್ದಾವು ಸಿರಿಯವನ್ನು ತನ್ನ ನೆಲೆಯಾಗಿ ಮಾಡಿಕೊಂಡಿದೆಯೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News