ಕೋಸ್ಟಲ್ ಟರ್ಫ್ ಲೀಗ್ ಕ್ರಿಕೆಟ್ ಪಂದ್ಯಾಟ: ಕೋಸ್ಟಲ್ ಕೌಂಟಿ ಕ್ಲಬ್ ಚಾಂಪಿಯನ್ಸ್

Update: 2021-10-25 05:30 GMT

ಮಂಗಳೂರು, ಅ.25: ಕೋಸ್ಟಲ್ ಕೌಂಟಿ ಕ್ಲಬ್ ಪ್ರಾಯೋಜಕತ್ವದ ಕೋಸ್ಟಲ್ ಟರ್ಫ್ ಲೀಗ್ ನಿಗದಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಪರ್ಫೆಕ್ಟ್ ಪಾಸ್ ಫಳ್ನೀರ್ ಎಂಬಲ್ಲಿ ನಡೆಯಿತು.

ಟರ್ಫ್ ಷರ್ವಾನ್, ಅಸಿಲ್(ಟೀಮ್ ಮ್ಯಾನೇಜರ್), ನೌಷಾರ್ (ಟೀಮ್ ಮೆಂಟರ್) ಹಾಗೂ ಅವ್ಫಾಝ್ ಕೃಷ್ಣಾಪುರ ಇವರ ಸಹಕಾರದಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಕೋಸ್ಟಲ್ ಕೌಂಟಿ ಕ್ಲಬ್ ತಂಡವು ಟೀಮ್ ಬ್ಯಾಕ್ ಸ್ಟ್ರೀಟ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಒಟ್ಟು 8 ತಂಡಗಳು ಪಾಲ್ಗೊಂಡಿದ್ದ ಈ ಕ್ರಿಕೆಟ್ ಪಂದ್ಯಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ಕೋಸ್ಟಲ್ ಕೌಂಟಿ ಕ್ಲಬ್ ತಂಡವು ಸಿ.ಸಿ.ಸಿ. ತಂಡವನ್ನು ಹಾಗೂ ಟೀಮ್ ಬ್ಯಾಕ್ ಸ್ಟ್ರೀಟ್ ತಂಡವು ಮಂಗಳೂರು ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಕ್ರಮವಾಗಿ ಫೈನಲ್ ಅರ್ಹತೆಯ ಪ್ರವೇಶ ತನ್ನದಾಗಿಸಿಕೊಂಡಿತು. ಪಂದ್ಯಾಕೂಟದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಫ್ಸೀರ್ (ಸಿಸಿಸಿ ತಂಡ), ಪಂದ್ಯಾಕೂಟದ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಇಮ್ರಾನ್ (ಸಿಸಿಸಿ ತಂಡ), ಉತ್ತಮ ಎಸೆತಗಾರನಾಗಿ ಅವ್ಫಾಝ್ ಕೃಷ್ಣಾಪುರ, ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯು ಜಿತೇಶ್ ಜೈನ್ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅಥಿತಿಗಳಾಗಿ ಸಾಜಿದ್, ಮೆಹಫೂಝ್, ಜಿಶಾನ್ ಭಾಗವಹಿಸಿದ್ದರು. ಪಂದ್ಯಾಕೂಟದ ಕೊನೆವರೆಗೂ ಸ್ಕೋರರ್ ಆಗಿ  ಫಾಹಿಕ್ ಮತ್ತು ಸಿನಾನ್ ಹಾಗೂ ತೀರ್ಪುಗಾರರಾಗಿ ಸಫ್ವಾನ್, ಸಲೀಂ, ಆಶಿಕ್, ನೌಫಲ್ ಸಹಕರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News