ಭ್ರಷ್ಟಾಚಾರ ಆರೋಪ: ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಎನ್‌ಸಿಬಿ ಆದೇಶ

Update: 2021-10-25 09:18 GMT

ಹೊಸದಿಲ್ಲಿ: "ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ ಎಂದು ಸಾಕ್ಷಿದಾರ ರೊಬ್ಬರಿಂದ ಆರೋಪಕ್ಕೊಳಗಾದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಎನ್ ಸಿಬಿ ಆದೇಶಿಸಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

ಸುದ್ದಿ ಸಂಸ್ಥೆ ANI ಪ್ರಕಾರ, ವಲಯ ನಿರ್ದೇಶಕರ ವಿರುದ್ಧ ಹೊರಿಸಲಾದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ನಡೆಸಲು ಮಾದಕವಸ್ತು ವಿರೋಧಿ ಸಂಸ್ಥೆಯ ಮೂವರು ಸದಸ್ಯರ ತಂಡ ಮಂಗಳವಾರ ಅ. 26 ರಂದು ದಿಲ್ಲಿಯಿಂದ ಮುಂಬೈಗೆ ಹೋಗಲಿದೆ.

ತಂಡವು ಎನ್‌ಸಿಬಿಯ  ಡಿಡಿಜಿ  ಜ್ಞಾನೇಶ್ವರ್ ಸಿಂಗ್ ಹಾಗೂ  ಇಬ್ಬರು ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ ಎಂದು ಎನ್‌ಸಿಬಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸೋಮವಾರ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News