ಕಾರ್ತಿ ಚಿದಂಬರಂಗೆ ವಿದೇಶ ಪ್ರವಾಸಕ್ಕೆ ಷರತ್ತಿನೊಂದಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

Update: 2021-10-25 09:45 GMT

ಹೊಸದಿಲ್ಲಿ:ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ರೂ.1 ಕೋಟಿ ಠೇವಣಿ ಇಟ್ಟರೆ ವಿದೇಶ ಪ್ರವಾಸ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ  ಹೇಳಿದೆ.

ಇಂದು ಹಾಗೂ  ಮುಂದಿನ ಮಂಗಳವಾರದ ನಡುವಿನ ಅವಧಿಯಲ್ಲಿ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಕಾರ್ತಿ ಚಿದಂಬರಂ ಅವರು ಏರ್‌ಸೆಲ್-ಮ್ಯಾಕ್ಸಿಸ್ ಡೀಲ್‌ಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕಾರ್ತಿ ಚಿದಂಬರಂ ಅವರು ತನಿಖೆಗೆ ಸಹಕರಿಸಲಿಲ್ಲ ಹಾಗೂ  ಅವರಿಗೆ ನೀಡಿದ ಸಮನ್ಸ್‌ಗೆ ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಆದಾಗ್ಯೂ, ಅಫಿಡವಿಟ್ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತು ಹಾಗೂ  "ಅಫಿಡವಿಟ್ ಸಲ್ಲಿಸಿದ ನಂತರ ಆ ಅಂಶವನ್ನು ವಿವರವಾಗಿ ವ್ಯವಹರಿಸಬಹುದು" ಎಂದು ಹೇಳಿತು.

ಸದ್ಯಕ್ಕೆ, ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ನ್ಯಾಯಾಲಯವು ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News