ಉಳ್ಳಾಲ: ಮಾದಕ ದ್ರವ್ಯ ವ್ಯಸನದ ವಿರುದ್ಧ ಜನಜಾಗೃತಿ ಸಭೆ

Update: 2021-10-25 09:54 GMT

ಉ‌ಳ್ಳಾಲ, ಅ.25: ಯುವಜನತೆ ದೇಶದ ಅತಿದೊಡ್ಡ ಆಸ್ತಿಯಾಗಿದ್ದು, ತಾತ್ಕಾಲಿಕ ಸಿರಿವಂತಿಕೆಯ ಆಸೆಗೆ ಬಲಿಯಾಗದೆ, ಡ್ರಗ್ಸ್, ಅಮಲು ವ್ಯಸನದ ಹಿಂದೆ ಬೀಳದೆ ಸತ್ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಹೇಳಿದ್ದಾರೆ. 

ಉಳ್ಳಾಲ‌ ಸದ್ಭಾವನಾ ವೇದಿಕೆ ವತಿಯಿಂದ ಭಾರತ್ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ನಡೆದ ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಉಳ್ಳಾಲ‌ ಠಾಣಾ ಉಪನಿರೀಕ್ಷಕ ರೇವಣ್ಣ ಸಿದ್ದಪ್ಪ ಮಾತನಾಡಿದರು. ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭ ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷ ಸದಾನಂದ ಬಂಗೇರ, ಭಾರತ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕಲಾವತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿನಯಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ರಾಜೀವಿ, ಶಾಲಾ ಸಂಚಾಲಕ ರೋಹಿ ದಾಸ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. 

ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‌ಮುಹಮ್ಮದ್ ಅನ್ವರ್ ವಂದಿಸಿದರು. ಇಸಾಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News