ಕೂಳೂರು-ಕಾವೂರು: ‘ಇನ್‌ಲ್ಯಾಂಡ್ ಸನ್‌ಲೈಟ್-ಮೂನ್‌ಲೈಟ್’ ವಸತಿ ಸಮುಚ್ಚಯ ಉದ್ಘಾಟನೆ

Update: 2021-10-25 10:29 GMT

ಮಂಗಳೂರು, ಅ.25: ನಿರ್ಮಾಣ ಕ್ಷೇತ್ರದ ಮುಂಚೂಣಿಯಲ್ಲಿರುವ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ.ಲಿ. ವತಿಯಿಂದ ಕೂಳೂರು-ಕಾವೂರು ರಸ್ತೆಯಲ್ಲಿ ನಿರ್ಮಾಣಗೊಂಡ ‘ಇನ್‌ಲ್ಯಾಂಡ್ ಸನ್‌ಲೈಟ್- ಮೂನ್‌ಲೈಟ್’ ವಸತಿ ಸಮುಚ್ಚಯವು ಸೋಮವಾರ ಉದ್ಘಾಟನೆಗೊಂಡಿತು.

ಒಂದೇ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ಎರಡು ಸಮುಚ್ಚಯಗಳನ್ನು ಶಾಸಕ ಡಾ.ಭರತ್ ವೈ. ಶೆಟ್ಟಿ ಮತ್ತು ಕ್ರೈಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಇನ್‌ಲ್ಯಾಂಡ್ ಸಂಸ್ಥೆಯು ನಿರ್ಮಾಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿದೆ. ಮಂಗಳೂರು ನಗರವಲ್ಲದೆ ಹೊರವಲಯದ ಪ್ರದೇಶಗಳಲ್ಲೂ ವಸತಿ ಸಮುಚ್ಚಯ ನಿರ್ಮಿಸುತ್ತಿರುವುದು ಶ್ಲಾಘನೀಯ. ಇನ್‌ಲ್ಯಾಂಡ್ ಸಂಸ್ಥೆಯು ಗುಣಮಟ್ಟದಲ್ಲಿ ಯಾವತ್ತೂ ರಾಜಿಮಾಡಿಕೊಳ್ಳದೆ ಗ್ರಾಹಕರಿಗೆ ಮಿತದರದಲ್ಲಿ ಫ್ಲಾಟ್‌ಗಳನ್ನು ನೀಡಿ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆಯೂ ಇನ್ನಷ್ಟು ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಮೂಲಕ ಸ್ವಂತ ಮನೆಯನ್ನಾಗಿಸಿಕೊಳ್ಳುವವರ ಕನಸು ಈಡೇರಿಸಲಿ ಎಂದು ಶುಭ ಹಾರೈಸಿದರು.

ಪುಷ್ಪರಾಜ್ ಜೈನ್ ಮಾತನಾಡಿ, ಮಂಗಳೂರು ಸ್ವಾರ್ಟ್ ಸಿಟಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಸ್ಮಾರ್ಟ್ ಕಟ್ಟಡಗಳನ್ನು ಇನ್‌ಲ್ಯಾಂಡ್ ನಿರ್ಮಿಸುತ್ತಿದೆ. ಮಂಗಳೂರಿನ ಸುಂದರೀಕರಣಕ್ಕೆ ಇನ್‌ಲ್ಯಾಂಡ್‌ನ ಸ್ಮಾರ್ಟ್ ಕಟ್ಟಡಗಳು ಕೂಡ ಸಾಕ್ಷಿಯಾಗಿವೆ. ದೇಶ ಮಾತ್ರವಲ್ಲದೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತಹ ಸ್ಮಾರ್ಟ್ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಿರ್ಮಾಣ ಕೆ್ಷೀತ್ರಕ್ಕೆ ಇನ್‌ಲ್ಯಾಂಡ್ ಮಾದರಿಯಾಗಿದೆ ಎಂದರು.

ಇನ್‌ಲ್ಯಾಂಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಇನ್‌ಲ್ಯಾಂಡ್‌ನ ನಿರ್ದೇಶಕ ವಹಾಜ್ ಯೂಸುಫ್ ಉಪಸ್ಥಿತರಿದ್ದರು.

ಆರ್ಕಿಟೆಕ್ ಸುರೇಶ್ ಪೈ ಮತ್ತು ಗುತ್ತಿಗೆದಾರ ಮಹಾಬಲರನ್ನು ಸನ್ಮಾನಿಸಲಾಯಿತು. ಮಾರ್ಕೆಟಿಂಗ್ ಮ್ಯಾನೇಜರ್ ಉಲ್ಲಾಸ್ ಸ್ವಾಗತಿಸಿದರು. ನಿರ್ದೇಶಕ ಮೆರಾಜ್ ಯೂಸುಫ್ ವಂದಿಸಿದರು.


*ಸನ್‌ಲೈನ್ ಸಮುಚ್ಚಯದಲ್ಲಿ 2 ಬಿಎಚ್‌ಕೆಯ 60 ಮತ್ತು ಮೂನ್‌ಲೈಟ್ ಸಮುಚ್ಚಯದಲ್ಲಿ 3 ಬಿಎಚ್‌ಕೆಯ 15 ಅಪಾರ್ಟ್‌ಮೆಂಟ್‌ಗಳಿವೆ. ಪ್ರಸಿದ್ಧ ವಾಸ್ತುಶಿಲ್ಪಿಗಳು ವಸತಿ ಸಮುಚ್ಛಯವನ್ನು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಜಿಮ್ನೇಶಿಯಂ, ವಾಕಿಂಗ್ ಟ್ರ್ಯಾಕ್, ವಿಶಾಲ ಕಾರು ಪಾರ್ಕಿಂಗ್, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ, ಇಂಟರ್‌ಕಾಮ್, 24 ಗಂಟೆ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಸೌಲಭ್ಯಗಳನ್ನು ಹೊಂದಿದೆ. ಎಲ್ಲ ವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಮನೆ ಹೊಂದುವ ಕನಸನ್ನು ಈಡೇರಿಸಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಬೆಳೆಯುತ್ತಿರುವ ಈ ಪ್ರದೇಶದಲ್ಲಿ ಹಲವಾರು ಕಂಪೆನಿಗಳು ನೆಲೆ ನಿಂತಿವೆ. ಪೆಟ್ರೋ ಕೆಮಿಕಲ್, ಲಾಜಿಸ್ಟಿಕ್ಸ್, ಶಿಪ್ಪಿಂಗ್ ಮತ್ತು ಏರ್‌ಲೈನ್ಸ್ ವಲಯಗಳಲ್ಲದೆ ಎಂಆರ್‌ಪಿಎಲ್, ಎನ್‌ಎಂಪಿಟಿ, ಎಂಎಫ್‌ಎಲ್ ಮತ್ತು ವಿಮಾನ ನಿಲ್ದಾಣದ ಉದ್ಯೋಗಿಗಳಿಗೆ ಮನೆಗಳ ಖರೀದಿಗೆ ಇದೊಂದು ಅವಕಾಶವಾಗಿದೆ.

ಈ ಅಪಾರ್ಟ್‌ಮೆಂಟ್‌ನಿಂದ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ, ಶಾಪಿಂಗ್ ಸೆಂಟರ್, ಧಾರ್ಮಿಕ ಕೇಂದ್ರಗಳಿಗೆ ಹೋಗಿ ಬರಲು ಪೂರಕ ವ್ಯವಸ್ಥೆಗಳಿವೆ.
ಮಾಹಿತಿಗೆ ಇನ್‌ಲ್ಯಾಂಡ್ ಸನ್‌ಲೈಟ್-ಮೂನ್‌ಲೈಟ್ ಕೂಳೂರು-ಕಾವೂರು ರಸ್ತೆ, (ಎಂ.ವಿ.ಶೆಟ್ಟಿ ಕಾಲೇಜು ಹತ್ತಿರ) ಮಂಗಳೂರು.
ದೂರವಾಣಿ: 9972089099, 9972014055, 9880138015. ವೆಬ್‌ಸೈಟ್: www.inlandbuilders.net, ಇಮೇಲ್: mktg.mlr@inlandbuilders.net ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News