ಉಡುಪಿ: ಸಾಂಪ್ರದಾಯಕ ವಿವಿಧ ವಿನ್ಯಾಸದ ಗೂಡುದೀಪ ಸ್ಪರ್ಧೆ

Update: 2021-10-25 13:08 GMT

ಉಡುಪಿ, ಅ.25: ಈ ಬಾರಿಯ ದೀಪಾವಳಿ ಆಚರಣೆ ಅಂಗವಾಗಿ ನಮ್ ಟೀಮ್ ಮಣಿಪಾಲ ಇದರ ಸಂಯೋಜನೆಯಲ್ಲಿ ಪ್ರಾಥಮಿಕ ಶಾಲೆಯ ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಎಂಟನೇ ತರಗತಿ ಯಿಂದ ಹತ್ತನೇ ತರಗತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಕ, ಬಣ್ಣದ ಕಾಗದದ ಗೂಡು ದೀಪ ಹಾಗೂ ಗ್ಲಾಸ್ ಪೇಪರ್‌ನಲ್ಲಿ ರಚನೆಯಾದ ವಿವಿಧ ವಿನ್ಯಾಸ, ಸಾಂಪ್ರದಾಯಕ ಗೂುದೀಪಗಳ ಸ್ಪರ್ಧೆ ಏರ್ಪಡಿಸಲಾಗಿದೆ.

ಎರಡು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿಜೇತರಿಗೆ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ನವಂಬರ್ 2ರ ಮಂಗಳವಾರ ಸಂಜೆ 4 ಗಂಟೆಯ ಒಳಗೆ ಉಡುಪಿ ಪರ್ಕಳದ ಪಾಟೀಲ್ ಕ್ಲೋತ್ ಸ್ಟೋರ್ ಎದುರು ಇರುವ ಸ್ವಾಗತ್ ಹೋಟೆಲ್‌ನಲ್ಲಿ ಮನೆಯಲ್ಲಿ ರಚಿಸಿದ ಆಕರ್ಷಕ ಗೂಡುದೀಪಗಳನ್ನು ತಂದು ನೀಡಬಹುದು.

ನವಂಬರ್ 3ರಂದು ಸಂಜೆ 6 ಕ್ಕೆ ಗೂಡುದೀಪ ಸ್ಪರ್ಧೆಗೆ ಬಂದ ಗೂಡುದೀಪಗಳನ್ನು ಪರ್ಕಳದ ಶೆಟ್ಟಿಬೆಟ್ಟುನಲಿ್ಲ ಪ್ರದರ್ಶನಕ್ಕೆ ಇಡಲಾಗುವುದು.

ಅಂಗಡಿಗಳಲ್ಲಿ ಸಿಗುವ ಚೈನಾ ಮಾದರಿಯ ಗೂಡುದೀಪವನ್ನು ಸ್ವೀಕರಿಸುವುದಿಲ್ಲ. ಕೇವಲ ಸಾಂಪ್ರದಾಯಿಕ ಶೈಲಿಯ ಗೂಡುದೀಪಗಳಿಗೆ ಮಾತ್ರ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಘಟಕ ಗಣೇಶ ರಾಜ್ ಸರಳೇಬೆಟ್ಟು (ದೂರವಾಣಿ:9845690278) ಇವರನ್ನು ಸಂಪರ್ಕಿಸಬಹುದು. ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News