ಭಟ್ಕಳ : ಮನೆಗೆ ನುಗ್ಗಿ ನಗ-ನಗದು ಕಳವು

Update: 2021-10-25 17:03 GMT

ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಒಳ ಹೊಕ್ಕಿರುವ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ 9 ಗಂಟೆಯಿಂದ ರವಿವಾರ ಬೆಳಗ್ಗೆ 10 ಗಂಟೆಯ ಅವಧಿಯಲ್ಲಿ ನಡೆದಿದೆ.

ಕಳ್ಳತನಕ್ಕೆ ಒಳಗಾದ 'ಗುಲ್–ಎ-ನಾಜ್' ಹೆಸರಿನ ಈ ಮನೆಯು ಎಮ್.ಜೆ.ಇಲ್ಯಾಸ್ ಎಂಬುವವರಿಗೆ ಸೇರಿದ್ದಾಗಿದೆ. ಮನೆಯಲ್ಲಿನ 2 ಕಪಾಟುಗಳನ್ನು ಒಡೆದು ತೆರೆಯಲಾಗಿದ್ದು,  1.5 ಲಕ್ಷ ರೂ. ನಗದು, ಒಂದು ಚಿನ್ನದ ಸರ, ಒಂದು ಚಿನ್ನದ ಕಿವಿಯೋಲೆ, ಒಂದು ರಿಂಗ್ ಕಳವು ನಡೆದಿರುವುದಾಗಿ ದೂರಲಾಗಿದೆ.

ಭಟ್ಕಳ ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News