ನನಗೆ ಸಮನ್ಸ್ ನೀಡಿಲ್ಲ,ಕೆಲಸದ ನಿಮಿತ್ತ ದಿಲ್ಲಿಗೆ ಬಂದಿದ್ದೇನೆ: ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್

Update: 2021-10-25 17:49 GMT
photo: twitter

 ಹೊಸದಿಲ್ಲಿ: ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಒಳಗೊಂಡ ಡ್ರಗ್ಸ್ ಪ್ರಕರಣದ ತನಿಖೆಯನ್ನು ಮುನ್ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿ ಸಮೀರ್ ವಾಂಖೆಡೆ ಇಂದು ಸಂಜೆ ಮುಂಬೈಯಿಂದ ದಿಲ್ಲಿಗೆ ಆಗಮಿಸಿದರು.  ಆದರೆ ಯಾವುದೇ ಸಂಸ್ಥೆಯಿಂದ ತನಗೆ ಸಮನ್ಸ್ ಬಂದಿರುವುದನ್ನು ನಿರಾಕರಿಸಿದರು.

ವಿಮಾನ ನಿಲ್ದಾಣದಲ್ಲಿ ವರದಿಗಾರರಿಂದ ಸುತ್ತುವರೆದಿರುವ ವಾಂಖೆಡೆ ಅವರು ಕೆಲವು ಕೆಲಸದ ನಿಮಿತ್ತ ರಾಷ್ಟ್ರ ರಾಜಧಾನಿಯಲ್ಲಿರುವುದಾಗಿ ಹೇಳಿದರು.

"ನನ್ನ ತನಿಖೆಗೆ ನಾನು ಸಂಪೂರ್ಣವಾಗಿ 100 ಪ್ರತಿಶತ ನಿಲ್ಲುತ್ತೇನೆ" ಎಂದು ಅವರು NDTV ಗೆ ತಿಳಿಸಿದರು.

ಸಮೀರ್ ವಾಂಖೆಡೆ ಹಾಗೂ ಇತರರು ನಟ ಶಾರುಖ್ ಖಾನ್ ಅವರಿಂದ 25 ಕೋಟಿ.ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಎನ್ ಸಿಬಿ ಸ್ವತಂತ್ರ ಸಾಕ್ಷಿದಾರರೊಬ್ಬರ ಗಂಭೀರ ಆರೋಪ ಹಾಗೂ ಮಹಾರಾಷ್ಟ್ರದ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರೊಂದಿಗಿನ  ಮಾತಿನ ಸಮರದ ನಡುವೆ ಸಮೀರ್ ದಿಲ್ಲಿಗೆ ದೌಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News