ಅ.26: ವಿದ್ಯುತ್ ವ್ಯತ್ಯಯ

Update: 2021-10-25 17:16 GMT

ಮಂಗಳೂರು, ಅ.25: ನಗರದ 33/11ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಭಗವತಿ ಫೀಡರ್‌ನಲ್ಲಿ ಅ.26 ರಂದು ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಪ್ರಗತಿ ಸರ್ವಿಸ್ ಸ್ಟೇಷನ್, ಪಿವಿಎಸ್ ಕಲಾಕುಂಜ, ಬೆಸೆಂಟ್ ಕಾಲೇಜ್, ಸಿಟಿ ಪಾಯಿಂಟ್, ಶಾರದಾ ವಿದ್ಯಾಲಯ, ಭಗವತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News