ನೇರಳಕಟ್ಟೆ : ಪ್ರಾಥಮಿಕ ಶಾಲೆಗೆ ದರ್ಬಾರ್ ಎಂಟರ್ ಪ್ರೈಸಸ್ ನಿಂದ ಶುದ್ಧೀಕರಿಸಿದ ನೀರಿನ ಯಂತ್ರ ಕೊಡುಗೆ

Update: 2021-10-25 17:45 GMT

ವಿಟ್ಲ :  ನೇರಳಕಟ್ಟೆ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ದರ್ಬಾರ್ ಎಂಟರ್ಪ್ರೈಸಸ್ ಮಾಲಕ ಅಬ್ದುಲ್ ಖಾದರ್ ಪರ್ಲೊಟ್ಟು ಅವರು ಕೊಡುಗೆಯಾಗಿ ನೀಡಿದ ಶುದ್ಧೀಕರಿಸಿದ ನೀರಿನ ಯಂತ್ರ ಸೋಮವಾರ ಶಾಲೆಗೆ ಸಮರ್ಪಿಸಲಾಯಿತು.

ಅಬ್ದುಲ್ ಖಾದರ್ ಪರ್ಲೊಟ್ಟು ಉದ್ಘಾಟಿಸಿ ಸಮರ್ಪಿಸಿದರು.

ಈ ಸಂದರ್ಭ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಎನ್.ಕೆ, ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಪರ್ಲೊಟ್ಟು, ಅತಾವುಲ್ಲಾ ನೇರಳಕಟ್ಟೆ, ಚಂದ್ರಶೇಖರ ಪೆರಾಜೆ, ರಶೀದ್ ಪರ್ಲೊಟ್ಟು, ಮೋಹನ ಗೌಡ ಪೆರಾಜೆ, ಮೋಹಿನಿ ನೇರಳಕಟ್ಟೆ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಕುಮಾರಿ  ಸಹ ಶಿಕ್ಷಕರಾದ ಗೀತಾ, ಲೀಲಾವತಿ, ಸೇಸಪ್ಪ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News