ಲಹಿರು ಕುಮಾರ್, ಲಿಟನ್‌ದಾಸ್‌ಗೆ ದಂಡ

Update: 2021-10-25 18:30 GMT
photo:AFP

ಅಬುಧಾಬಿ, ಅ. 25: ರವಿವಾರ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯವೊಂದರಲ್ಲಿ ಆಕ್ರಮಣಕಾರಿ ಕೃತ್ಯಗಳ ಮೂಲಕ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಶ್ರೀಲಂಕಾದ ವೇಗಿ ಲಹಿರು ಕುಮಾರ್ ಮತ್ತು ಬಾಂಗ್ಲಾದೇಶದ ಬ್ಯಾಟರ್ ಲಿಟನ್‌ದಾಸ್‌ಗೆ ಕ್ರಮವಾಗಿ ಅವರಪಂದ್ಯ ಶುಲ್ಕಗಳ 25 ಶೇಕಡ ಮತ್ತು 15 ಶೇಕಡ ದಂಡ ವಿಧಿಸಲಾಗಿದೆ.

ಶಾರ್ಜಾದಲ್ಲಿ ನಡೆದ ಪಂದ್ಯದ ವೇಳೆ ಈ ಆಟಗಾರರು ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದರು ಹಾಗೂ ಹೊಡೆದಾಡಿಕೊಳ್ಳಲು ಮುಂದಾದರು. ಆಗ ಅಂಪೈರ್ ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸಿದರು.

ಬಾಂಗ್ಲಾದೇಶ ಇನಿಂಗ್ಸ್‌ನಲ್ಲಿ ದಾಸ್ ಔಟಾದ ಬಳಿಕ ಘಟನೆ ನಡೆದಿದೆ. ದಾಸ್‌ರನ್ನು ಔಟ್ ಮಾಡಿದ ಬಳಿಕ, ಆಕ್ರಮಣಕಾರಿ ವರ್ತನೆಗಳು ಮತ್ತು ಮಾತುಗಳೊಂದಿಗೆ ಕುಮಾರ್, ದಾಸ್‌ರತ್ತ ಹೋದರು. ಆಗ ದಾಸ್ ಅದಕ್ಕೆ ಆಕ್ರಮಣಕಾರಿ ರೀತಿಯಲ್ಲೇ ಪ್ರತಿಕ್ರಿಯಿಸಿದರು.

ಈ ಪಂದ್ಯವನ್ನು ಶ್ರೀಲಂಕಾ 5 ವಿಕೆಟ್‌ಗಳಿಂದ ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News