ಕಾರ್ಕಳ: ಕನ್ನಡ ರಾಜ್ಯೋತ್ಸದಂಗವಾಗಿ ಸಮೂಹ ಗಾಯನ

Update: 2021-10-26 11:35 GMT

ಕಾರ್ಕಳ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಆಶಯದಂತೆ ಅ. 28ರಿಂದ ಕಾರ್ಕಳದ 150 ಕಡೆ ಸಮೂಹ ಗಾಯನ ನಡೆಯಲಿದೆ.

ಕನ್ನಡ ರಾಜ್ಯೋತ್ಸವವನ್ನು ಒಂದು ವಾರ ಕಾಲ ವಿಶಿಷ್ಟ ಕನ್ನಡಪರ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸಲು ಸಂಕಲ್ಪ ಮಾಡಲಾಗಿದೆ. ಕನ್ನಡದ 3 ಹಾಡುಗಳ ಸಮೂಹ ಗಾಯನ ಹಾಡುಗಳನ್ನು ಅ. 28ರಂದು ಬೆಳಿಗ್ಗೆ 11 ಗಂಟೆಯಿಂದ 11.30ರವರೆಗೆ ಕಾರ್ಕಳ ಕ್ಷೇತ್ರಾದ್ಯಂತ ಏಕಕಾಲದಲ್ಲಿ ಹಾಡುವ ಯೋಜನೆ ಹಾಕಿಕೊಳ್ಳಲಾಗಿದೆ.  ದೇವಸ್ಥಾನ, ನದಿತಟ, ಪರ್ವತ ಪ್ರದೇಶ, ಗದ್ದೆ, ಉದ್ಯಾನವನ, ಶಾಲಾ ವಠಾರ ಮೊದಲಾದೆಡೆ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ರಾಗಸಂಯೋಜನೆಯೊಂದಿಗೆ ಗಾಯನ ನಡೆಯಲಿದೆ.

ಭಜನಾ ಮಂಡಳಿ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು "ಕನ್ನಡ ಹಬ್ಬ" ಆಚರಿಸಲು ಆಯೋಜಕರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News