×
Ad

ನಾವು ಪಾಕಿಸ್ತಾನದ ವಿರುದ್ಧ ಗೆದ್ದಾಗ ನಮ್ಮ ತಂದೆ ಮಸೀದಿಯಲ್ಲಿ ಭಾರತದ ಧ್ವಜ ಹಿಡಿದು ನಿಂತಿದ್ದರು: ಇರ್ಫಾನ್‌ ಪಠಾಣ್

Update: 2021-10-26 21:25 IST

ಹೊಸದಿಲ್ಲಿ: ಪಾಕಿಸ್ತಾನದ ವಿರುದ್ಧದ ಕ್ರಿಕೆಟ್‌ ಪಂದ್ಯಾಟದಲ್ಲಿ ಹೆಚ್ಚು ರನ್‌ ನೀಡಿ ದುಬಾರಿಯಾದರು ಎಂಬ ಒಂದೇ ಕಾರಣಕ್ಕೆ ಮತೀಯ ಆಧಾರದಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಬೌಲರ್‌ ಮುಹಮ್ಮದ್‌ ಶಮಿ ವಿರುದ್ಧ ಆನ್‌ ಲೈನ್‌ ನಿಂದನೆಗಳನ್ನು ನಡೆಸಲಾಗಿತ್ತು. ಹಲವರು ಪಾಕ್‌ ಏಜೆಂಟ್‌ ಎಂದು ಅವರನ್ನು ಹೀಯಾಳಿಸಿದ್ದರು. ಈ ಸಂದರ್ಭದಲ್ಲಿ ಇದೀಗ ಭಾರತೀಯ ಕ್ರಿಕೆಟ್‌ ತಂಡದ ವೇಗಿ ಇರ್ಫಾನ್‌ ಪಠಾಣ್‌ ತಮ್ಮ ಹಳೆಯ ನೆನಪನ್ನು ತಂದೆಯ ವೀಡಿಯೋದೊಂದಿಗೆ ಟ್ವೀಟ್‌ ಮಾಡಿದ್ದಾರೆ.

"ಇದು ನನ್ನ ತಂದೆಯ ಕಡೆಯಿಂದ ಸಣ್ಣದೊಂದು ಕಥೆ. ನಾವು ೨೦೦೪ರಲ್ಲಿ ಪಾಕಿಸ್ತಾನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಸಂದರ್ಭ. ನಾವು ಜಾಮಿಯಾ ಮಸೀದಿಯಲ್ಲಿ ವಾಸಿಸುತ್ತಿದ್ದೆವು. ನಮ್ಮ ವಿಜಯವನ್ನು ಆಚರಿಸಲು ಹಲವಾರು ಅಭಿಮಾನಿಗಳು ಮಸೀದಿಯ ಮುಂದೆ ಬಂದಾಗ ನನ್ನ ತಂದೆ ಮಸೀದಿಯ ಟೆರೇಸ್‌ ಗೆ ಭಾರತದ ಧ್ವಜವನ್ನು ಹಿಡಿದುಕೊಂಡು ತೆರಳಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಿದರು" ಎಂದು ಟ್ವೀಟ್‌ ಮಾಡಿದ್ದಾರೆ.

ವೀಡಿಯೋದಲ್ಲಿ ಇರ್ಫಾನ್‌ ಪಠಾಣ್‌ ತಂದೆ ಮಾತನಾಡುವುದನ್ನು ವೀಕ್ಷಿಸಬಹುದಾಗಿದೆ. " ನಾಲ್ಕು ದಿಕ್ಕುಗಳಲ್ಲೂ ಜನರು ನೆರೆದಿದ್ದರು. ಎಲ್ಲರೂ ಇರ್ಫಾನ್‌ ಪಠಾಣ್‌ ಝಿಂದಾಬಾದ್‌, ಯೂಸುಫ್‌ ಪಠಾಣ್‌ ಝಿಂದಾಬಾದ್‌, ಜಾಮಾ ಮಸ್ಜಿದ್‌ ಝಿಂದಾಬಾದ್‌ ಎಂದು ಘೋಷಣೆ ಕೂಗುತ್ತಿದ್ದರು" ಎಂದು ಹೇಳುವುದನ್ನು ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ ಗೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದು, "ಇಲ್ಲಿ ನೀವು ಯಾವುದೇ ಕಾರಣಗಳನ್ನು ಸ್ಪಷ್ಟನೆಗಳನ್ನು ನೀಡಬೇಕಾದ ಅಗತ್ಯವಿಲ್ಲ. ಆದರೆ, ಅಂತಹ ಸಂದರ್ಭ ಬಂದೊದಗಿದ್ದಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News