ಮಂಗಳೂರು; ಯುವತಿಯ ಅತ್ಯಾಚಾರ ಪ್ರಕರಣ : ಆರೋಪಿ ಸೆರೆ

Update: 2021-10-26 16:38 GMT

ಮಂಗಳೂರು, ಅ.26: ತನ್ನ ನಿಜ ಹೆಸರನ್ನು ಮರೆಮಾಚಿ ಯುವತಿಯನ್ನು ಉಪಾಯದಿಂದ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಿನ್ನಿಗೋಳಿಯ ಮುನ್ನ ಇಬ್ರಾಹೀಂ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಯುವತಿ ಮೊಬೈಲ್ ಹಾಗೂ ಸಿಮ್‌ನ್ನು ಖರೀದಿಸಲು ಆರೋಪಿಯ ಮೊಬೈಲ್ ಶಾಪ್‌ಗೆ ತೆರಳಿದ್ದು, ಇದನ್ನೇ ನೆಪವಾಗಿಸಿಕೊಂಡ ಆರೋಪಿ ಯುವತಿಯನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ತನ್ನ ನಿಜ ಹೆಸರನ್ನು ಮರೆಮಾಚಿ ಪ್ರೀತಿಯ ನಾಟಕವಾಡಿ 2021ರ ಆಗಸ್ಟ್‌ನಲ್ಲಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಅ.25ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News